ಹನಿಗವನಗಳು
ಮನಸ್ಸು ಸರಿಯಾಗಿದ್ದವರಿಗೆ
ಎಲ್ಲವೂ ಹತ್ತಿರ,
ಯಾವುದು ಭಾರವಲ್ಲ,
ಮನ ಸರಿಯಿಲ್ಲದವರಿಗೆ
ಹತ್ತಿರವೂ ದೂರವೇ,,,
ಹಗುರವೂ ಭಾರವೇ,,,,,,,
***†**********
ಕೆಲವರು
ಅರ್ಥ ವಾಗದ ಪುಸ್ತಕಗಳು
ಹಲವರು
ಓದಲಾಗದ ಪುಸ್ತಕಗಳು
**********
ಕಾಣಲಾಗುವುದು ಎಲ್ಲರಿಗೂ
ಎದುರಿಗೆ ಕಾಣುವ
ಸುಂದರ ಮುಖಲಕ್ಷಣ
ಕಾಣಲಾಗುವುದಿಲ್ಲ ಯಾರಿಗೂ
ಮನದೊಳಗಿನ
ಹಗೆಯ ಹೊಗೆಯ ಅವಲಕ್ಷಣ
********
ಮಿಲಿಟರಿಯಲ್ಲಿ ಕೊಲ್ಲಲು
ಬಂದೂಕ ಬೇಕು
ಕೆಲವರಿಗೆ ಕೊಲ್ಲಲು
ನಾಲಿಗೆ ಸಾಕು
–ವಿದ್ಯಾ ವೆಂಕಟೇಶ್. ಮೈಸೂರು
ಚೆನ್ನಾಗಿವೆ ಹನಿಗವನಗಳು
ಅರ್ಥ ಪೂರ್ಣ ವಾದ ಹನಿಗವನಗಳನ್ನು ಬರೆದಿರುವ ಸೋದರಿ ನಿನಗೆ ಅಭಿನಂದನೆಗಳು
ತೀಕ್ಷ್ಣ ಭಾವಲಹರಿ…ಸೊಗಸಾದ ಚುಟುಕುಗಳು..
ಚಿಕ್ಕ, ಚೊಕ್ಕ, ಹನಿಗವನಗಳಿಗಾಗಿ ಅಭಿನಂದನೆಗಳು.
ಬಹಳ ಚೆನ್ನಾಗಿ ಮೂಡಿಬಂದಿದೆ. ಎಲ್ಲ ನಿತ್ಯ ಸತ್ಯ
ಸೆರೆಹಿಡಿದಿರುವಿರಿ ಬಾಳಿನ ವಾಸ್ತವಿಕತೆಯ/
ಪದಗುಚ್ಚಗಳಲ್ಲಿ ಬಣ್ಣಿಸಿರುವಿರಿ ಸತ್ಯತೆಯ/
ಮಾರ್ಧ್ವನಿಸಿರುವಿರಿ ಬದುಕಿನ ಸಿಹಿಕಹಿಯ/
ಪದಪುಂಜಗಳಲ್ಲಿ ವರ್ಣಿಸಿರುವಿರಿ ನೈಜತೆಯ/
ಹನಿಗವನಗಳ ಬರಹದ ಶೈಲಿಯಲ್ಲಿ ನಿರೊಪಿಸಿರುವಿರಿ /
ಮಾನವನ ಗುಣಗಳ ಸಹಜತೆಯಲ್ಲಿ ಸಂಗ್ರಹಿಸಿರುವಿರಿ/
ಕವಿ ನಿಪುಣತೆಯಲ್ಲಿ ನಿತ್ಯಸತ್ಯಗಳ ಬಹಿರಂಗಿಸಿರುವಿರಿ/
ಮಾನವನ ನೆಡೆತೆಯನು ಸತ್ಯಾಂಶದಲ್ಲಿ ರಚಿಸಿರುವಿರಿ/
ಹನಿಗವನಗಳ ಬರೆಯುವುದು ಜನ್ಮಜಾತ ನೈಪುಣ್ಯತೆಯು/
ಅನುದಿನದ ಆಗುಹೋಗುಗಳ ಗಮನಿಸುವ ಕುಶಲತೆಯು/
ಅರ್ಥಪೂರ್ಣದಲ್ಲಿ ಲಿಖಿಸುವ ಶೈಲಿ ದೈವದ ಕೊಡುಗೆಯು/
ಯಾವ ಅಡಚಣೆಗಳಿಲ್ಲದೆ ಸಾಗಲಿ ನಿಮ್ಮ ಬರವಣಿಗೆಯು/