“ಡಿಗ್ರಿ”
ದೊಡ್ಡ ದೊಡ್ಡ
ಕಾಲೇಜು ಕಟ್ಟಡಗಳ
ಮೆಟ್ಟಿಲು ಹತ್ತಿ ಇಳಿದವಳಲ್ಲ-ಆದರೆ
ಜೀವನದ ನಿಜ ಸಂತೆಯಲಿ
ಬರಿಗಾಲಲ್ಲಿ ಓಡಾಡಿ
ದಣಿದು ಪಡೆದಿಹೆ
ಡಿಗ್ರಿಗಳ ಸರಮಾಲೆಯಲ್ಲ,
ಬದುಕಿನ,,,,
ಸತ್ಯಧನುಭವಗಳ ವರಮಾಲೆಯನ್ನ,,,
ಚುಚ್ಚಿದ ಮುಳ್ಳುಗಳೆಷ್ಷೋ
ಒತ್ತಿದ ಕಲ್ಲುಗಳೆಷ್ಷೋ
ಎಲ್ಲವೂ ಬರೆಸಿದವು
ಕವನಗಳ ಸಾವಿರಾರು,
ಗಟ್ಟಿಯಾಗಿಸಿದವು,
ಬಂಡೆಯಾಗಿಸಿದವು,
ಚುಚ್ಚಿದವರ ಮುಂದೆ
ಕಣ್ಣೀರು ಹಾಕದಂತೆ ಕಲಿಸಿದವು
ಕುಗ್ಗಿದರು ಬಗ್ಗಿದರು
ಎದೆಸೆಟೆಸಿ ಎತ್ತರಕ್ಕೆ ಬೆಳೆಸಿದವು
–ವಿದ್ಯಾ ವೆಂಕಟೇಶ್. ಮೈಸೂರು
ಅಬ್ಬಬ್ಬಾ .. ಬದುಕಿನಲ್ಲಿ ಗಳಿಸಿಕೊಂಡಿರುವ ಪದವಿಯನ್ನು ಕವನದಲ್ಲಿ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಸೋದರಿ .
ತುಂಬಾ ಚೆನ್ನಾಗಿದೆ. ಬದುಕು ಮಾಗಿದ ಪರಿ ಸೊಗಸಾಗಿ ಅನಾವರಣ ಗೊಂಡಿದೆ
ಅನುಭವ ಕಲಿಸಿದ ಪಾಠದ ಬಗ್ಗೆ ಬರೆದಿರುವ ಕವನ ಸೊಗಸಾಗಿದೆ
ಅನುಭವಗಳೇ ಜೀವನದ ಪಾಠ ಎಂಬ ಭಾವ ಕವನದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ.
ಜೀವನಾನುಭವದಿಂದ ವ್ಯಕ್ತಿತ್ವವನ್ನು ಗಟ್ಟಿಗೊಳಿಕೊಂಡ ಅನುಭವಾಮೃತದ ಸುಂದರ ಕವಿತೆ
ಅನುಭವ ಕಲಿಸಿದ ಪಾಠ ಚೆನ್ನಾಗಿದೆ!
ಚಂದದ ಕವನ
ಮೆಚ್ಚುಗೆ ತಿಳಿಸಿದ ಎಲ್ಲರಿಗೂ ಮನಃಪೂರ್ವಕವಾಗಿ
ವಂದನೆಗಳು
ತುಂಬಾ ಸೊಗಸಾಗಿ ಮೂಡಿ ಬಂದಿದೆ.
Very meaningful
ಯಾವುದೇ ವಿಶ್ವವಿದ್ಯಾಲಯವು ಕಲಿಸದ ಜೀವನದ ಪಾಠವನ್ನು ಬದುಕು ಸರಳವಾಗಿ ನಮ್ಮ ದೈನಂದಿನ ಜೀವನದ ಆಗು ಹೋಗುಗಳಲ್ಲಿ ಪ್ರತಿಕ್ಷಣವೂ ಕಲಿಸುತ್ತಿರುತ್ತದೆ. ಅದಕ್ಕೆ ನೀವು ಬರೆದಿರುವ ಈ ಕವನವೇ ಸಾಕ್ಷಿ..
ಡಿಗ್ರಿ ಪಡೆದವರೆಲ್ಲಾ ಒಂದೆರಡು ಸಾಲು ಗೀಚಿ ಎಂದರೇ ಮೂಗು ಮುರಿಯುವವರ ಮದ್ಯೆ..
ಬರೆಯುವುದಿಕ್ಕೆ ಡಿಗ್ರಿ ಯಾಕೆ ಬೇಕು ಅಲ್ಲವೇ…