ಜೀವನ ಪಯಣ
ಜನನದೂರಿಂದ ಮರಣದೂರಿಗೆ
ಜೀವನ ಪಯಣ ಗಾಡಿ ಹೊರಟಿದೆ
ನೆನಪುಗಳ ಮೂಟೆ ಹೊತ್ತುಕೊಂಡು
ನಲಿವು ನೋವಿನ ಹಳ್ಳ ದಿನ್ನೆ ದಾಟಿದೆ.
ಭಗವಂತನೇ ಚಾಲಕ ನಿರ್ವಾಹಕನಾಗಿ
ಸಾಗುವೂರಿಗೆ ಚೀಟಿಯ ನೀಡಿರುವನು
ಬಂಧು ಬಳಗದ ನಿಲ್ದಾಣಗಳಲ್ಲಿ ನಿಂತು
ಸಂಬಂಧಿಕರ ಹತ್ತಿಸಿಕೊಂಡು ಇಳಿಸಿದನು.
ಬಾಳ ತಿರುವಿನ ಘಟ್ಟಗಳಲ್ಲಿ ತಿರುಗಾಡಿಸಿ
ರಸಮಯ ಕ್ಷಣಗಳ ಮೆಲುಕು ಹಾಕಿಸಿದನು
ಬಾಳ ಖಾನಾವಳಿಯಲ್ಲಿ ಊಟ ಮಾಡಿಸಿ
ಬಾಳೆಲೆಯಂಗೆ ಬಾಳಿದೆಂದು ತಿಳಿಸಿದನು.
ಜನನಿ ಗರ್ಭದ ಪ್ರಥಮ ನಿಲ್ದಾಣದಿಂದ
ಅವನಿ ಗರ್ಭದ ಅಂತಿಮ ನಿಲ್ದಾಣ್ವೆಂದನು
ನಾವರಿತುಕೊಂಡು ಹೋಗೋಣವೆಂದ
ಶಿವ ಸಾನ್ನಿಧ್ಯವ ಪಡೆಯೋಣವೆಂದನು.
–ಶಿವಮೂರ್ತಿ.ಹೆಚ್.
ಅನುಭವ ಅನುಭಾವದ ಕವನ ಚೆನ್ನಾಗಿದೆ
ವಾವ್…ಇಡೀ ಬದುಕಿನ ಅನಾವರಣವನ್ನು ಕವನದ ಮೂಲಕ ವ್ಯಕ್ತಪಡಿಸಿರುವ ರೀತಿ ಬಹಳ ಚೆನ್ನಾಗಿ ಮೂಡಿಬಂದಿದೆ ಸಾರ್ ಧನ್ಯವಾದಗಳು.
ತುಂಬಾ ಅರ್ಥವತ್ತಾಗಿ ಬದುಕಿನ ಮಜಲು ಮತ್ತು ಮಹಲುಗಳ ಬಗ್ಗೆ ಹೇಳಿದ್ದಿರಿ ಸರ್..
ಇಡೀ ಬದುಕಿನ ಅರ್ಥ, ಸಾರ ಅಡಗಿದೆ ಕವನದಲ್ಲಿ
ಜೀವನದ ಪಯಣ, ಅದರ ಮಜಲುಗಳು ಭಾವನಾತ್ಮಕವಾಗಿ ಮೂಡಿಬಂದ ಸೊಗಸಾದ ಕವನ.
ಜೀವನಪಯಣದ ಸಾರವನ್ನು ಕವಿತೆ ಸುಂದರವಾಗಿ ಅನಾವರಣಗೊಳಿಸಿದೆ. ಅಭಿನಂದನೆಗಳು
ಬದುಕಿನ ಮಜಲುಗಳನ್ನು ವ್ಯಕ್ತಪಡಿಸಿರುವ ರೀತಿ ಚೆನ್ನಾಗಿದೆ
ಚಂದದ ಕವನ
ಧನ್ಯವಾದಗಳು ಸರ್