ಪುನೀತ್ ರಾಜಕುಮಾರ್ ರವರಿಗೆ ನುಡಿ ನಮನ
ಅಪ್ಪುವೆಂಬ ಅಭಿಮಾನದೊಂದಿಗೆ
ಅರಸು ಆಗಿ ಪೃಥ್ವಿಯಲ್ಲಿ ಮಿಲನವಾದ
ಯುವರತ್ನವೂ ನೀನೂ..
ವೀರ ಕನ್ನಡಿಗನಾಗಿ ಆಕಾಶದೆತ್ತರಕೆ
ಬಿಂದಾಸ್ ಆಗಿ ಬೆಳೆದ ರಾಮನಂತ
ನಮ್ಮ ಬಸವನು ನೀನೂ…
ದೊಡ್ಮನೆ ಹುಡುಗನಾಗಿ ರಾಜಕುಮಾರದ
ಭಾಗ್ಯವಂತನಂತೆ ತಾಯಿಗೆ ತಕ್ಕ ಮಗನಾಗಿ
ಚಲಿಸುವ ಮೋಡದಂತೆ ಮರೆಯಾದ ಹೊಸಬೆಳಕು ನೀನೂ..
ಯಾರಿವನು ಎಂದವರಿಗೆ ಭಕ್ತ ಪ್ರಹ್ಲಾದನೆಂದೆನಿಸಿ
ಬೆಟ್ಟದ ಹೂವಿನಂತೆ ಬೆಳೆದು ಸಹೃದಯ ಸಹನತೆಯ
ಪವರ್ ತೋರಿದ ಅಂಜನಿಪುತ್ರ ನೀನೂ..
ಸನಾದಿ ಅಪ್ಪಣ್ಣನಿಗೆ ಶಿವ ಮೆಚ್ಚಿದ ಕಣ್ಣಪ್ಪನಾಗಿ
ಭೂಮಿಗೆ ಬಂದ ಭಗವಂತನಂತೆ ವಸಂತಗೀತವನ್ನು
ನುಡಿಸಿ ಮರೆಯಾದ ರಾಜನ ಎರಡು ನಕ್ಷತ್ರಗಳು ನೀನೂ..
ಪರಶುರಾಮನಂತೆ ಎಂದಿಗೂ ಅಜಯನಾಗಿ ಉಳಿದು
ರಾಜ್ ವಂಶಿಕನಾಗಿ ಪ್ರೇಮದ ಕಾಣಿಕೆ ನೀಡಿ ಅರಸನಂತೆ
ನಮ್ಮೆಲ್ಲರ ಮನದ ಸಜ್ಜನಿಕೆಯ ನಟಸಾರ್ವಭೌಮನು ನೀನೂ..
ಹುಡುಗರೊಂದಿಗೆ ಜಾಲಿಯ ಜಾಕಿಯಾಗಿ
ಯಾರೇ ಕೂಗಾಡಲಿ ನಿನ್ನಿಂದಲೆ ಎಂದು
ಪರಮಾತ್ಮನಲಿ ಲೀನವಾದ ರಣವಿಕ್ರಮನೂ ನೀನೂ..
ನಿನ್ನಂತ ಸಹೃದಯಿಗೆ ಖಗದ ಜನರೆಲ್ಲಾ ಕಂಬನಿ
ಮಿಡಿಯುತಿಹರು ಹೋಗಿ ಬಾ ಮತ್ತೆ ಪ್ರೀತಿಯ
ಪುನೀತ….ನಿಮಗಿದೋ ನಮ್ಮೆಲ್ಲರ ನುಡಿನಮನ…
-ದಿವಾಕರ್ ಡಿ, ಕೊತ್ತನಹಳ್ಳಿ
Very good writing
Thanks
ಇತ್ತೀಚೆಗೆ ಅನಿರೀಕ್ಷಿತವಾಗಿ ಬಾರದಲೋಕಕ್ಕೆ ನೆಡೆದ ಪುನೀತ್ ರಾಜಕುಮಾರ್ ವರಿಗೆ ಸಲ್ಲಿಸಿರುವ ನುಡಿನಮನ ಕವನ ಚೆನ್ನಾಗಿದೆ ಸಾರ್ ಧನ್ಯವಾದಗಳು
ಪುನೀತ್ ರವರ ನುಡಿ ನಮನದ ಕವನವನ್ನು ಮೆಚ್ಚುಗೆ ವ್ಯಕ್ತಪಡಿಸಿರುವುದಕೆ ತಮಗೆ ಧನ್ಯವಾದಗಳು…ಅವರ ಚಲನಚಿತ್ರಗಳ ಅವರ ಒಂದೊಂದು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಹ ಚಲನಚಿತ್ರಗಳಾದವು ಎಂದರೆ ಅತಿಶಯೋಕ್ತಿ ಎನಿಸದಿರದು ಅಲ್ಲವೇ…
ಕೊನೆಯಲ್ಲಿ ಅವರು ಮಾಡಿದ ಒಳ್ಳೆಯ ಕೆಲಸಗಳು ಬೆಳಕಿಗೆ ಬಂದವು. ಅಷ್ಟರವರೆಗೂ ಬಲಗೈಯ್ಯಿಂದ ಮಾಡಿದ ಕೆಲಸ ಎಡಗೈಗೂ ಗೊತ್ತಾಗಬಾರದು ಅನ್ನುವ ರೀತಿಯಲ್ಲೇ ನಡೆದುಕೊಂಡರು. ಒಬ್ಬ ಉತ್ತಮ ನಟ ಅಷ್ಟೇ ಅಲ್ಲ, ವ್ಯಕ್ತಿಯನ್ನೂ ಕಳೆದು ಕೊಂಡೆವು.
ಒಂದು ಸರ್ಕಾರ ಅಥವಾ ಒಂದು ಸಂಸ್ಥೆಯು ಮಾಡಲಾಗದಂತಹ ಸಾಧನೆಯನ್ನು ಪುನೀತ್ ರವರು ಒಬ್ಬರೇ ದಾನಶೂರ ಕರ್ಣನಂತೆ ಹಲವಾರು ಜೀವಗಳಿಗೆ ಜೀವದನಿಯಾಗಿದ್ದರು. ಅಂತಹ ಮಹಾನ್ ಚೇತನ ಪುನೀತ್ ರವರು ನಮ್ಮ ಹೆಮ್ಮೆಯ ವಿಷಯ..
ಪುನೀತ್ ರವರ ಚಿತ್ರಗಳ ಕವನದ ಹಾರ ಚೆನ್ನಾಗಿದೆ, ಎಂದೆಂದೂ ಮುಗಿಯದ ದುಃಖ ತರುವ , ಮರೆಯಲಾಗದ, ಅನ್ಯಾಯದ ದಾರುಣ ಸಾವು ಅವರದು.
ಅಕಾಲಮೃತ್ಯು ಅತ್ಯಂತ ಪ್ರತಿಭಾವಂತನೊಬ್ಬನ ಜೇವ ಸೆಳೆದುದು ದೌರ್ಭಾಗ್ಯ. ಅವರಿಗಾಗಿ ಕವಿನಮನವು ನುಡಿನಮನ ರೂಪದಲ್ಲಿ ಅವರು ನಟಿಸಿದ ಚಲನಚಿತ್ರಗಳ ಹೆಸರಲ್ಲೇ ಪಡಿಮೂಡಿಸಿದ ತಮ್ಮ ವಿಶೇಷ ಕವನವು ಮನಮುಟ್ಟಿತು ಸರ್.
ಅನಿರೀಕ್ಷಿತವಾಗಿ ಕಳೆದುಕೊಂಡ ಪ್ರೀತಿಯ ಅಪ್ಪುವಿನ ಕುರಿತಾದ ಅವರು ನಟಿಸಿದ ಚಿತ್ರಗಳ ಹೆಸರುಗಳನ್ನೊಳಗೊಂಡ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ