ನಿದಿರೆಯ ಹಾಡು
ಜೀಕಿ ನಿದಿರೆಯು ಕಣ್ಣಕೊಳದಲಿ
ತಾಕಿ ಕಣ್ಣೆವೆ ಎದುರುಬದುರಲಿ
ಹಾಕಿ ತಾಳವ ನವಿಲ ರೀತಿಯೆ
ಮೂಕ ನರ್ತನ ಮಾಡಿದೆ…
ಇರುಳ ಶಾಂತ ನಿದಿರೆ ಚಂದ
ಸವಿಯ ಕನಸು ಮತ್ತೂ ಅಂದ
ಕನಸು ತುಟಿಯ ಮೇಲೆ ಬರೆದ
ಮುಗುಳು ನಗೆಯ ಸೂಸಿದೆ..
ಹಚ್ಚಿ ಮನದ ಒಳಗೆ ಸೊಡರು
ಬಿಚ್ಚಿ ಗತದ ಪುಟದ ಪದರು
ತುಚ್ಛವಾಗೆ ಎಡರೂ ತೊಡರೂ
ಸ್ವಚ್ಛ ಬೆಳಕು ಉದಿಸಿದೆ….
ತಮವ ಕಳೆದು ಬೆಳಕು ಸೋಸಿ
ಉಷೆಯು ಹೊನ್ನ ಕಿರಣ ಹಾಸಿ
ಇಳೆಯು ಹಿಮದ ಲೇಪ ಪೂಸಿ..
ಬೆಳಗನೆದುರು ಗೊಂಡಿದೇ…
ಜೀಕಿ ನಿದಿರೆಯು ಕಣ್ಣ ಕೊಳದೀ…..
-ವಿದ್ಯಾಶ್ರೀ ಅಡೂರ್.
ಚೆಂದ ಉಂಟು ಮೇಡಂ ಕವನ
ತುಂಬಾ ಚಂದದ ಕವನ
ಸುಂದರ ಕವನ ಚೆನ್ನಾಗಿದೆ.ಅಭಿನಂದನೆಗಳು.ಮೇಡಂ.
ಕವನ ಇಷ್ಟವಾಯಿತು.
ನಿದ್ರಾದೇವಿಯ ಮಡಿಲಿನ ಪರಮಸುಖದ ಆಸ್ವಾದನೆ ಕವನದಲ್ಲಿ ಸೊಗಸಾಗಿ ಮೂಡಿಬಂದಿದೆ.
ಸೊಗಸಾದ ಕವನ ವಿದ್ಯಾಶ್ರೀ.
ಲಕ್ಷ್ಮೀದೇವಿ