ಈ ಹಾಡು ……….
ಈ ಹಾಡು
ನಿಮಗಾಗಿ
ನಿಮ್ಮ ಪ್ರೀತಿಗಾಗಿ.
ಈ ಹಾಡು
ಶೋಷಿತ ಹೃದಯಗಳದ್ದು
ಮಿಡಿವ ಹೃದಯಗಳಿಗಾಗಿ.
ಈ ಹಾಡು
ನೊಂದ ಮನಗಳದ್ದು
ಕರುಣೆಯ ಮನಗಳಿಗಾಗಿ.
ಈ ಹಾಡು
ಜನುಮಜನುಮದ್ದು
ಮಮತೆಯ ಸಂದೇಶಕ್ಕಾಗಿ.
ಈ ಹಾಡು
ಯುಗಯುಗಗಳದ್ದು
ಪ್ರೀತಿಯ ಕರೆಗಾಗಿ.
ಈ ಹಾಡು
ನಮ್ಮದು ನಿಮ್ಮದು
ವಾತ್ಸಲ್ಯದ ಸ್ಪಂದನೆಗಾಗಿ.
ಈ ಹಾಡು
ಆರ್ತ ಮನುಕುಲದ್ದು
ಪ್ರೀತಿಗಾಗಿ ಶಾಂತಿಗಾಗಿ.
ಈ ಹಾಡು
ವಿಶ್ವಜರದು
ಸುಖ,ಸಮೃದ್ಧಿಗಾಗಿ.
ಈ ಹಾಡು
ಮಾನವತೆಯದು
ಸಮತೆಗಾಗಿ,ಏಕತೆಗಾಗಿ.
ಈ ಹಾಡು
ನಮಗಾಗಿ ನಿಮಗಾಗಿ
ಪ್ರೀತಿಯ ಶಾಂತಿಯ ಮಿಲನಕಾಗಿ.
ಈ ಹಾಡು
ಸಹಬಾಳ್ವೆಯ ಕೋರಿಕೆಗಾಗಿ
ಒಂದೇ ಕುಲದ ಈಡೇರಿಕೆಗಾಗಿ.
– ಪ್ರಕಾಶ ದೇಶಪಾಂಡೆ,ಹುಕ್ಕೇರಿ
ಚೆನ್ನಾಗಿದೆ ಸರ್
ಈ ಸೊಗಸಾದ ಹಾಡು ನಮ್ಮೆಲ್ಲರಿಗಾಗಿ…
ಸಹಬಾಳ್ವೆಯ ಕೋರಿಕೆಗಾಗಿ ಬರೆದ ಕವಿತೆ ಚೆನ್ನಾಗಿದೆ
ಚೆನ್ನಾಗಿದೆ ಸರ್….ಈಗಿನ ಕಾಲದ ಬೇಕುಗಳನ್ನು ಸರಳವಾಗಿ, ಗಟ್ಟಿಯಾಗಿ ಧ್ವನಿಸಿದೆ ನಿಮ್ಮ ಕವನ
It’s a lovely poem.
ಮಾನವೀಯತೆಯ ದೃಷ್ಟಿಯಿಂದ ಅತ್ಯುತ್ತಮ ಕವನ ಅಭಿನಂದನೆಗಳು ಸರ್