ಕಮರದಿರಲಿ ಭರವಸೆ

Share Button

“ಮಾಡಿದ್ದುಣ್ಣೋ ಮಹಾರಾಯ” ಎಂಬುದು ಇಂದಿನ ಪರಿಸ್ಥಿತಿಗೆ ಸರಿಯಾಗಿ ಹೊಂದುವಂತಹ ನಾಣ್ಣುಡಿ ಆಗಿದೆ. ಕರೋನಾ ವೈರಸ್ ನಿಂದಾಗಿ ಹೆಚ್ಚು ಕಡಿಮೆ ಇಡೀ ಜಗತ್ತೇ ಲಾಕ್ ಡೌನ್ ಗೆ ಒಳಗಾಗಿದೆ. ಕೆಲಸ ಕೆಲಸ ಎಂದು ಬಿಡುವಿಲ್ಲದೆ ಸುತ್ತುತ್ತಿದ್ದ ಜನರೆಲ್ಲರೂ ಇಂದು ಮನೆಯಲ್ಲಿ ಕುಳಿತು ಮಾಡಿ ಹಾಕಿದ್ದನ್ನು ತಿನ್ನುವ ಗತಿ ಬಂದಿದೆ. ಇನ್ನು ಮಕ್ಕಳನ್ನು ಈ ಸಮಯದಲ್ಲಿ ಕಂಟ್ರೋಲ್ ಮಾಡುವುದು ಮನೆಯವರಿಗೆ ಅಸಾಧ್ಯದ ಕೆಲಸವಾಗಿದೆ. ಮಕ್ಕಳಾದರೂ ಮಾಡುವುದೇನು?. ತಿಂಗಳುಗಟ್ಟಲೆ ರಜೆ ಆದರೆ ಮನೆಯಿಂದ ಹೊರಹೋಗುವಂತಿಲ್ಲ. ಇನ್ನು SSLC, PUC ಯ‍ ವಿದ್ಯಾರ್ಥಿಗಳ ಗತಿ ತ್ರಿಶಂಕು ಸ್ವರ್ಗದಂತಾಗಿದೆ.

ಕೇರಳದಲ್ಲಿ ಕೇವಲ ಮೂರು ಪರೀಕ್ಷೆಗಳು ಬಾಕಿ ಇದ್ದು ಆಚೆಗೆ ಓದಲು ಆಗದು ಈಚೆಗೆ ಬಿಡಲು ಆಗದು  ಎಂಬ ಸ್ಥಿತಿ ಬಂದಿದೆ. ಓದಿದರೆ ಎಷ್ಟು ಸಮಯವೆಂದು ಓದಬಹುದು? ಈ ಪರೀಕ್ಷೆಗಳನ್ನು ಹೀಗೆ ಅನಿರ್ದಿಷ್ಟಾವಧಿಗೆ ಮುಂದೂಡಿದರೆ ಏನು ಮಾಡಲು ಸಾಧ್ಯವಿಲ್ಲ. ಕೆಲವು ಪಾಲಕರು ಮಕ್ಕಳನ್ನು ದಿನಪೂರ್ತಿ ಓದುವಂತೆ ಪೀಡಿಸುವುದು ಇರಬಹುದು, ಆದರೆ ಇದು ತಪ್ಪು. ಪರೀಕ್ಷೆ ಇದೆ ಎಂದ ಮೇಲೆ ಒಂದು ಹತ್ತು ದಿವಸ ಮೊದಲಾದರೂ ತಿಳಿಸುತ್ತಾರೆ ನಂತರ ಓದಿದರೂ ಸಾಕು. ಹಾಗಂತ ಓದಲೇ ಬಾರದು ಎಂದೇನಲ್ಲ. ಓದಿದ್ದನ್ನು ಆಗಾಗ ಮೆಲುಕು ಹಾಕುತ್ತಿರಬೇಕು.

ಇಂದಿನ ದಿನಗಳಲ್ಲಿ ಮಾನವನು ಯಾವುದೋ ನಾಯಿ ನರಿಗಳನ್ನು ತುಂಡರಿಸಿ ಮಾರುವ ಜಾಗದಿಂದ ಬಂದ ಈ ಕರೊನಾವೆಂಬ ಕ್ರಿಮಿಗೆ ಹೆದರಿ ಮನೆಯೊಳಗೆ ತೆಪ್ಪಗೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹಲವರಿಗೆ ಇದು ಸಾಧ್ಯವಾಗದೇ ಇರಬಹುದು. ಪ್ರಧಾನಿ ನಮ್ಮ ಒಳ್ಳೆಯದಕ್ಕೆ ಹಲವಾರು ಸೂತ್ರಗಳನ್ನು ಅನುಸರಿಸಲು ಹೇಳುತ್ತಾರೆ ಎಂಬುದನ್ನು ಅರಿತುಕೊಂಡು ಲಾಕ್ ಡೌನ್ ಅನ್ನು ಪಾಲಿಸಿದರೆ ನಮಗೆ ಒಳ್ಳೆಯದು. ಆದುದರಿಂದ ಸ್ಟೇ ಹೋಂ ಅಂಡ್ ಸ್ಟೇ ಸೇಫ್.

-ಸುದರ್ಶನ್. ಬಿ
ಹತ್ತನೇ ತರಗತಿ
ಸತ್ಯನಾರಾಯಣ ಹೈಸ್ಕೂಲ್ ಪೆರ್ಲ

13 Responses

  1. Nisha says:

    ಉತ್ತಮ ಬರಹ. ಶುಭವಾಗಲಿ

  2. ಹರ್ಷಿತಾ says:

    ನಿನ್ನಂತಹ ಮಕ್ಕಳ ಮನಸ್ಥಿತಿಯನ್ನು ನೆನೆಯುವಾಗ ನಮಗೂ ಬೇಜಾರಾಗುತ್ತದೆ..ಧೈರ್ಯಗೆಡಬೇಡ…ಒಳ್ಳೆಯದಾಗಲಿ

  3. ಒಳ್ಳೆಯ ಕಾಲ ಇದ್ದೇ ಇದೆ. “ಭರವಸೆಯೆ ಬಾಳಿನಬೆಳಕು” ಮಗೂ.

  4. Hema says:

    ಕನ್ನಡದಲ್ಲಿ ಸದಭಿರುಚಿಯ ಬರಹಗಳನ್ನು ಬರೆಯುತ್ತಿರುವುದು ನೋಡಿ ಖುಷಿಯಾಗುತ್ತಿದೆ. ಒಳ್ಳೆಯದಾಗಲಿ, ಸುದರ್ಶನ್ .

    • ನಯನ ಬಜಕೂಡ್ಲು says:

      ಧನ್ಯವಾದಗಳು. ನೀವು ನೀಡುತ್ತಿರುವ ಪ್ರೋತ್ಸಾಹವೂ ದಾರಿ ದೀಪದಂತೆ.
      – ಸುದರ್ಶನ್. ಬಿ

  5. KRISHNAPRABHA M says:

    ಇಷ್ಟು ಚಿಕ್ಕ ವಯಸ್ಸಿಗೆ ಎಂತಹ ಪ್ರಬುದ್ಧತೆ. ಬಾಕಿ ಉಳಿದಿರುವ ಪರೀಕ್ಷೆಗಳನ್ನು ಚೆನ್ನಾಗಿ ಬರೆಯುವಂತಾಗಲಿ. ಶುಭವಾಗಲಿ ಪುಟ್ಟ

  6. Savithri bhat says:

    ಉತ್ತಮ ಬರಹ

  7. Anonymous says:

    ಸುದರ್ಶನನ ಮನದಾಳದ ಮಾತು ಬರಹ ರೂಪದಲ್ಲಿ ಮನ ಮುಟ್ಟುವಂತಿದೆ. ಉತ್ತಮ ಬರಹಗಾರನಾಗುವ ಭವಿಷ್ಯವಿದೆ. ಎಲ್ಲಾ ಒಳ್ಳೆಯದಾಗಬಹುದೆಂದು ಹಾರೈಸೋಣ..ನಿನಗೆ ಶುಭವಾಗಲಿ ಸುದರ್ಶನ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: