ಧ್ರುವ ತಾರೆ
ಹೆತ್ತವರ ತೊರೆದು ನೀ ಹತ್ತಿರ ಬಂದಿರುವೆ
ನನ್ನಾಸ್ತಿ ಪ್ರೀತಿ ಅದನು ನಿನಗೆ ನಾ ಕೊಡುವೆ
ಏಕಾಂಗಿಯಾದೆನೆಂದು ತಗಿಬೇಡ ಕಣ್ಣೀರ
ನೀ ಅಳುತಲಿರೆ ಹೀಗೆ ನನ್ನೆದೆಯು ತುಸು ಭಾರ…..
ನನ್ನ ತಮ್ಮ – ತಂಗಿಯರ ಕಡೆಗಾಣದಿರು
ಅವರಿಗೆ ನಾವೇ ಎರಡನೇ ತಂದೆ- ತಾಯಂದಿರು
ನಿನ್ನೊಡನೆ ನನ್ನದು ಹೊಸ ಪಯಣ
ಗಂಡನಷ್ಟೇ ಅಲ್ಲ ನಾ ಪ್ರೇಮಿ ನಿನಗೆ ಪ್ರತಿಕ್ಷಣ…..
ಕೋಪದಲ್ಲಿ ಇರಬಹುದು ನಾ ರಾಕ್ಷಸ
ಹಳಿಯದಿರು ಮನಸೊಳಗೆ ಮಾಡುವೆನು ಸರಸ
ನನಗೆ ಸಹನೆಯು ಅಲ್ಪ
ನಿನಗಾಗಿ ಮಾಡುವೆ ಸಂಕಲ್ಪ…..
ನಿನ್ನೊಂದಿಗೆ ಆಡಿದರೆ ನಾ ಜಗಳ
ತಿಳಿಯೇ ನೀನು ಅದರ ತಿರುಳ
ನನ್ನ ತಾಯಿಯೊಂದಿಗೆ ಬೇಡ ಕಾದಾಟ
ಮಗಳೆಂದು ತಿಳಿದಾಳ ಇರಲಿ ಒಡನಾಟ…..
ಈ ಸೂರ್ಯ, ಚಂದ್ರ, ನಕ್ಷತ್ರಗಳೆಲ್ಲವನು ಮರೆತರೂ
ಕೊನೆಗೆ ನನ್ನನ್ನೇ ನಾ ಮರೆತರೂ
ಮರೆಯೆ ನಿನ್ನ ನನ್ನಾಣೆ
ಚಿಂತಿಸದಿರು ಹೇ ಜಾಣೆ
ನಿನ್ನ ಹೊರತು ನನಗೆ ಇನ್ಯಾರೇ?
ನೀನರಿಯೆ ನೀ ನನ್ನ ಧ್ರುವ ತಾರೆ……
ಜೀವ ಕೊಟ್ಟಳು ತಾಯಿ
ಪ್ರೀತಿಯಿತ್ತವಳು ತಾಯಿ
ಉಳಿದ ಜಿವನಕೆ ನಾ ನಿನ್ನ ಅನುಯಾಯಿ
ನಾ ನಿನಗೆ- ನೀ ನನಗೆ ಇದುವೇ ಚಿರಸ್ಥಾಯಿ
ನೀವಿಬ್ಬರೂ ನನ್ನಯ ಜೀವ
ಅದು ಯಾವ ಪದಗಳಿಗೂ ಸಿಗದಂಥ ಅನುಭಾವ……
-ವಿದ್ಯಾ ಶ್ರೀ ಬಿ. ಬಳ್ಳಾರಿ
ಗಂಡ ಹೆಂಡಿರ ಪ್ರೀತಿ ಕಾಣುವುದು
ಸಮರಸವೇ ಜೀವನ, ನೋವು ನಲಿವೆರಡರ ಜೊತೆ ಜೊತೆ ಸಾಗುವುದೇ ಪಯಣ. Nice
NICE
ಸಮರಸದ ಬಾಳಿಗೆ ನಲ್ಗವನ ಚೆನ್ನಾಗಿದೆ.