ರಾಮಾಯಣ ಸಾರ
ಕೋಸಲ ದೇಶದ ದಶರಥ ರಾಜನಿಗೆ|
ಹಿರಿಮಗನಾಗಿ ಜನಿಸಿದ ರಾಮ|
ಕೌಸಲ್ಯಾದೇವಿಯ ಹಿರಿಮೆಯ ಪುತ್ರನಿಗೆ|
ಕರಜೋಡಿಸಿ ಭಕ್ತಿಲಿ ನಮಿಸುತ್ತ ನಾಮ||೧||
ದಶಾವತಾರದ ರಾಮಾವತಾರವೆ|
ಧರಣಿಲಿ ಬಾಳಿದ ಪುರುಷೋತ್ತಮ|
ಲೋಕದ ಜನರ ಕಷ್ಟ ಕರಗಿಸುವ|
ಲಾಲಿತ್ಯವೆನಿಪ ಲೋಕಾಭಿರಾಮ||೨||
ಪಿತನಾ ಮಾತಿನ ಶಿರಸಾವಹಿಸಿ|
ತೀರ್ಪಿತ್ತ ಕೈಕೆಯ ಹಠವ ಪೂರೈಸಿ|
ಕೌಸಲ್ಯೆ ಸುಮಿತ್ರೆಯರ ಕಣ್ಣೀರೊರೆಸಿ•
ಹೊರಟನು ಹದಿನಾಲ್ಕು ವರ್ಷ ವನವಾಸಿ||೩||
ರಾಮನ ಸತಿ ರಮಣಿ ಸೀತಾಮಣಿ |
ಪತಿವ್ರತೆ ಸಾಲಲ್ಲಿ ಮಿಂಚುವ ಮಾನಿನಿ|
ಸೋದರ ವಾತ್ಸಲ್ಯಕೆ ಭರತನೆ ಪ್ರಥಮ|
ಅತ್ತಿಗೆಯು ಲಕ್ಷ್ಮಣನಿಗೆ ಅಮ್ಮನ ಸಮ||೪||
ಮಾಯಾಮೃಗಕೆ ಮನಸೋತ ಸೀತೆ|
ಮಮ್ಮಲ ಮರುಗಿದಳು ಲಂಕೆಯಲಿ ಮತ್ತೆ|
ರಾವಣನ ಹಿಡಿತಕ್ಕೆ ದಕ್ಕಲಿಲ್ಲ ಮಾತೆ|
ಅವನಿಲಿ ಅವತರಿಸಿದ ಪುನೀತೆ ಪ್ರಖ್ಯಾತೆ||೫||
ರಾಮ-ರಾವಣರ ಯುದ್ಧದ ತತ್ವ|
ಅಡಗಿಸಿದ ಅವತಾರಿ ಅಸುರೀ ಕೃತ್ಯ|
ಮನುಜಗೆ ರಾಮ-ಲಕ್ಷ್ಮಣರ ಉಪದೇಶ|
ಮಾನಿನಿಯರಿಗೆಲ್ಲ ಸೀತೆಯೆ ಆದರ್ಶ||೬||
ರಾಮಾಯಣ ಮಹಾಭಾರತ ಪುರಾಣಜ್ಞಾನ|
ಯುಗಯುಗ ಕಳೆದರು ನವೀನ ಕಥನ|
ಬಯಸಿಲ್ಲ ವ್ಯಾಸ,ವಾಲ್ಮೀಕಿ ಪ್ರಶಸ್ತಿ ಸನ್ಮಾನ|
ಬಯಕೆ ನಿರೀಕ್ಷೆಯೇ ಲೋಕ ಕಲ್ಯಾಣ||೭||
-ವಿಜಯಾಸುಬ್ರಹ್ಮಣ್ಯ, ಕುಂಬಳೆ
ಧನ್ಯವಾದಗಳು ಪ್ರಕಟಿಸಿದ ಹೇಮಮಾಲಾ ಅವರಿಗೂ ಹಾಗೇ ಸುರಹೊನ್ನೆಯಲ್ಲಿ ವ್ಯವಹರಿಸುವ ಎಲ್ಲಾ ಬಂಧು-ಮಿತ್ರರಿಗೂ ರಾಮನವಮಿಯ ಶುಭಾಶಯಗಳು.
ದೇಶಕ್ಕೊದಗಿದ ಕೊರೋನಾ ಕಂಟಕ ಶೀಘ್ರದಲ್ಲೇ ಇಲ್ಲಿಂದ ಸಂಪೂರ್ಣವಾಗಿ ತೊಲಗಲಿ ಅದಕ್ಕಾಗಿ ಶ್ರೀ ರಾಮನ ಅನುಗ್ರಹ ಬೇಡುವ ವಿಜಯಾಸುಬ್ರಹ್ಮಣ್ಯ
ಓದಿದಾಗ .ಒಮ್ಮೆ ರಾಮನನ್ನು ನೆನೆಯುವ ,ಒಳ್ಳೆಯ ಸಂದೇಶ Akka
ಈಗಿನಜನರೇಷನವರಿಗೆ ಪೌರಾಣಿಕ ಕಥೆಯಾವುದು ಬೇಡ ನೋಡು ಒಮ್ಮೆ ಎಂದಾಗ .ರಾಮಕಷ್ಟ ಬಂದಾಗೆ ನಮಗೆ ಬೇಢಎನ್ನುವರು .
ಒಂದು ಕವನದೊಳಗೆ ಇಡೀ ರಾಮಾಯಣ ವನ್ನು ವಿವರಿಸಿದ ಪರಿ ಅದ್ಭುತ.
ಸೂಕ್ಷ್ಮ ರೂಪದಲ್ಲಿ ಅತಿ ಹಿರಿದಾದ ರಾಮಾಯಣವನ್ನು ಉಣ ಬಡಿಸಿದ ಪರಿ ಅನನ್ಯ. ಧನ್ಯವಾದಗಳು ವಿಜಯಕ್ಕ.