ಬದುಕೆಂದರೆ…
‘
ಜೀವನದ ಪಥದಲಿ
ಮುಳ್ಳೇ ತುಂಬಿದ್ದರೂ
ಸುಗಮವಾಗಿ ಸಾಗುವೆನೆಂಬ
ಕೆಚ್ಚೆದೆಯೇ ಬದುಕು…
ಕಗ್ಗತ್ತಲೆಯ ಕಾರಿರುಳು
ಸುತ್ತ ಆವರಿಸಿದ್ದರೂ
ಹೊಂಬೆಳಕ ಕಾಣುವೆನೆಂಬ
ಆಶಾಭಾವವೇ ಬದುಕು…
ಕಷ್ಟ ಕಾರ್ಪಣ್ಯಗಳು
ಬಿಡದೆ ಕಾಡಿದರೂ
ಎಲ್ಲವ ಮೆಟ್ಟಿನಿಲ್ಲವೆನೆಂಬ
ಧೈರ್ಯವೇ ಬದುಕು…
ನಿರಾಶೆಯ ಅಂಧಕಾರ
ಮನೆಮನವ ಕವಿದಿದ್ದರೂ
ನಾಳೆ ಒಳಿತಾಗುವುದೆಂಬ
ನಂಬಿಕೆಯೇ ಬದುಕು…
ಪ್ರತಿ ಹೆಜ್ಜೆ ಹೆಜ್ಜೆಗೂ
ಬೆಂಬಿಡದೆ ಸೋತರೂ
ಗೆದ್ದೇ ಗೆಲುವೆನೆಂಬ
ಆತ್ಮವಿಶ್ವಾಸವೇ ಬದುಕು…
ವಿವೇಕಹೀನ ಮಂದಿ
ನೂರು ರೀತಿ ನಿಂದಿಸಿದರೂ
ಸಾಧಿಸಿ ತೋರಿಸುವೆನೆಂಬ
ಆತ್ಮಸ್ಥೈರ್ಯವೇ ಬದುಕು…
– ಪರಿಣಿತ ರವಿ, ಎರ್ನಾಕುಲಂ
ಕವನ ಇಷ್ಟವಾಯಿತು.
Superb. ಬದುಕಿನ ಪಥದಲ್ಲಿ ಭರವಸೆ ತುಂಬುವಂತಹ ಸಾಲುಗಳು.
ಬದುಕು ಏನೆಂಬುದನ್ನು ಸಾರಿ ಹೇಳುವ ಉತ್ತಮ ಚಿಂತನೆಯ ಕವನ.