ಹೇಗೆ ವಂದಿಸಲಿ ಕನ್ನಡ ನಾಡಿಗೆ
ಹೇಗೆ ವಂದಿಸಲಿ ಕನ್ನಡ ನಾಡಿಗೆ
ಕಾಶ್ಮೀರದ ಸೊಬಗನು ಮೂಡಿಸಿದೆ ಕೊಡಗಿನ ಗಿರಿಯಲಿ
ಗಂಗಾ ಯಮುನೆಯ ಪಾವಿತ್ರವನ್ನು ಕರುಣಿಸಿದೆ ಕಾವೇರಿಯಲಿ
ಸಕ್ಕರೆಯ ಸ್ವಾದ ಮೆಳಿಸಿದೆ ಮಂಡ್ಯದ ಕಬ್ಬಿನ ತೆನೆಯಲಿ
ಶಿಲ್ಪಕಲೆಯ ಸುನಾಮಿಯನ್ನೇ ಸೃಷ್ಟಿಸಿದೇ ಬಾದಾಮಿ
ಐಹೊಳೆ ಹoಪೆ ಹಳೇಬೀಡು ಬೇಲೂರಿನ ನೆಲದಲಿ
ಕಲೆಯ ಸಾಮ್ರಾಜ್ಯವನೇ ಕರುಣಿಸಿದೆ
ಗಂಗಾ ಕದಂಬ ಹೊಯ್ಸಳ ಚಾಲುಕ್ಯರ ವಂಶದಲಿ
ಸಿರಿಗಂಧದ ಕಾನನವೇ ಸೃಷ್ಟಿಸಿದೇ ಸಹ್ಯಾದ್ರಿಯಲಿ
ಸೂರ್ಯ ರಶ್ಮಿಯ ಚಿತ್ತಾರ ಚಿತ್ರಿಸಿದೆ ಕಡಲ ಕಿನಾರೆಯಲಿ
ಸಾಹಿತ್ಯದ ಭಂಡಾರವ ಮೂಡಿಸಿದೆ
ಪಂಪ ರನ್ನ ಶಿಶುನಾಳ ಕನಕ ಪುರಂದರ ಕೃತಿಗಳಲಿ
ಸೌಂದರ್ಯಾದ ನಕ್ಷತ್ರವನೆ ಚಿತ್ರಿಸಿದೇ
ಕನ್ನಡ ನಾಡಿನ ವನಿತೆಯರಲಿ
ವೀರತ್ವದ ವಜ್ರಕಠೋರತೆಯ ದೇಹವನೆ
ನೀಡಿದೆ ಕಾರ್ಯಪ್ಪ ,ತಿಮ್ಮಯ್ಯ ಹೃದಯದಲಿ
ಧರ್ಮ ಧರ್ಮದ ಕಂದಕವ ತೊಡೆದು
ಶಾಂತಿಯ ಮಂತ್ರವ ಮೂಡಿಸಿದೆ ಕನ್ನಡದ ಮನಗಳಲಿ
ಹೇಗೆ ವಂದಿಸಲಿ ಕನ್ನಡತಾಯೆ
ನೀ ಸೃಷ್ಟಿಸಿದ ಕನ್ನಡ ನಾಡಿಗೆ…
– ರಾಘವ್ ರಾವ್ , ಚೆನ್ನೈ.
ಕನ್ನಡ ನಾಡಿನ ಹಿರಿಮೆಯನ್ನು ಸಾರುವಂತಹ ಸಾಲುಗಳು .
Dhanyavada madam.
ಹೌದು, ಕನ್ನಡಾಂಬೆಯ ಹಿರಿಮೆ ಅಪಾರ. ಸುಂದರ ಕವನ.