ಆತ್ಮ ಸಾಕ್ಷಿ
.
ಮೊನ್ನೆ ತಾನೆ ಹುಡುಕಿ ಹುಡುಕಿ
ಬಲತಿರುವಿನ ಸೊಂಡಿಲ
ಮುದ್ದಾದ ಗಣಪನ ಹೊತ್ತು ತಂದೆ
ನಿನ್ನೆ ಅದರ ಪೂಜೆಗೈದು
ಇಪ್ಪತ್ತೊಂದು ಗರಿಕೆ-ಹೂವನಿಟ್ಟು
ಪೂಜೆ ಮಾಡಿ ಬೇಡಿಕೊಂಡೆ
ಸಂಜೆಗಿನ್ನು ಅಕ್ಷತೆಯ ಚೆಲ್ಲಿ
ಮನೆ-ಮನೆಯ ಗಣಪನಿಗೆ
ಸಾಷ್ಟಾಂಗ ನಮಸ್ಕರಿಸಿ ಬಂದೆನು
ರಾತ್ರಿಗಿನ್ನು ಗಣಪನ ಬೀಳ್ಕೊಡಲು
ಜಲವ ಬಳಿಯ ನಿಂತೆನು
ನದಿಗೆ ಗಣಪನ ವಿಸರ್ಜಿಸಲು
ಮತ್ತೆ ಬಂದೇ ಬರುವನೆಂಬ
ಆತ್ಮ ಸಾಕ್ಷಿಯೊಂದಿಗೆ
ಗಣಪನ ಮೂರ್ತಿ ವಿಸರ್ಜಿಸಿದೆ
ಗಣಪನಿನ್ನು ನೀರ ಸೇರಿ
ನೀರಿನಲ್ಲಿ ಲೀನವಾಗಿ
ಭೂತಾಯಿಯ ಮಡಿಲ ಸೇರಿಹುದು
ಮರು ವರ್ಷ ಗಣಪ
ಮತ್ತೆ ಬಂದೇ ಬರುವನೆಂಬ
ಆತ್ಮ ಸಾಕ್ಷಿಯಲಿ ಹಿಂತಿರುಗಿಹೆ.
-ರಾಜೇಶ್ವರಿ, ಚಿತ್ರದುರ್ಗ
ಚೆನ್ನಾಗಿದೆ ಕವನ
ಸರಳ ಸುಂದರ ಕವನ.