ಉಯ್ಯಾಲೆ!

Share Button
ಆಟಕೆಂದೆ ಬಾನಿನಿಂದ
ತೂಗಲೆಂದೆ ಅತ್ತ ಇತ್ತ
ಇಳೆಯವರೆಗು ತೂಗಿ ಬಿಟ್ಟ
ಬೆರಗು ತುಂಬಿದುಯ್ಯಾಲೆ,
ನಾವೆರೂಪದುಯ್ಯಾಲೆ!
.
ಮಿಣಮಿಣಿಕೆಯ ಮಿರುಗು ತೋರಿ
ವಾಲಿ ವಾಲಿ ವಾಲಿಸಿಡುತ
ಬೀಸು-ಗಾಳಿ ಭರದಲಿಡುತ
ತೇಲು ತೇಲು ಎನುತಲೆ
ಮೋಹಪಾಶಕುಯ್ಯಾಲೆ!
.
ಕಗ್ಗ ಕಂತೆ ಹಿಡಿಕೆ ಸಹಿತ,
ಅದೆಂಥ ಹಗ್ಗ, ಅದೇನು ಬಿಗಿತ!
“ಶಬ್ದ, ಅಲೆಗೆ ಎದೆಯನೊಡ್ಡು”
“ಕೂಗು, ಮಾಗು” ಎನುತಲೆ,
ಬಣ್ಣ ಮಣ್ಣಿನುಯ್ಯಾಲೆ!
.
ಗಡ ಗಡ ಗಡ ಏರಿಸಿಡುತ
ದಡ ದಡ ದಡ ಇಳಿಸಿಬಿಡುತ
ಕರ್ಮ, ಮರ್ಮ ಅರಿಯಲೆಂದೆ
ಅಸಲಿ, ನಕಲಿ ದಾಂಧಲೆ,
ಅರಚು, ಪೇಚಿನುಯ್ಯಾಲೆ!
.
ನೆಳಲು, ಬೆಳಕು ರವಿಯ ಸೂತ್ರ
ಕಾಂತಿ ಭ್ರಾಂತಿ ಶಶಿಯ ಪಾತ್ರ
ಪುಟಪುಟಿಸಿರೆ ಪದದ ಚಿತ್ರ
ಜೀವ ಭಾವ ಬಲದಲೆ
ಅಂತರಂಗಕುಯ್ಯಾಲೆ!
.
ತೆರೆಯೆ ಕಣ್ಣು ಇಳೆಯ ಸುಳಿಗೆ
ಧಾರೆ ಧಾರೆ ಸುರಿವ ಮಳೆಗೆ
ಹಾರೆ ಪಕುಶಿ ಬೆಳಕಿನೆಡೆಗೆ
ನಾವೆ ಕರಗಿ ಕತ್ತಲೆ
ಸತ್ಯ ಮಿಥ್ಯ ಇತ್ತಲೆ!

-ಕೆ. ಆರ್.ಎಸ್.ಮೂರ್ತಿ

5 Responses

  1. Latha Shashibhushan says:

    Superb

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್.
    ನೆಳಲು ಬೆಳಕು ರವಿಯ ಸೂತ್ರ – ಈ ಸಾಲುಗಳು ತುಂಬಾ ಇಷ್ಟ ಆಯಿತು

  3. Shankari Sharma says:

    ಸುಲಲಿತ ಕವನ..ಇಷ್ಟವಾಯ್ತು.

  4. Anonymous says:

    ಸೊಗಸಾದ ಕವನ … ಕೆಲವೊಂದು ಸಾಲುಗಳು ಭಾವ ಪೂರ್ಣ.

  5. ನಾಗಭೂಷಣ says:

    ಉಯ್ಯಾಲೆ ಆಟವ
    ಬದುಕಿನ ಓಟವ
    ಚಂದದಿಂದ ಪೊಣಿಸಿದ
    ಪದಗಳ ಪಾಟವ

    ಕವನವೊಂದು‌
    ಹೇಳಲೇನು ಸುಂದರ
    ಕಿವಿಗಳಿಗಿಂಪು
    ಮನಕೆ ತಂಪು.

    -ಅಮನಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: