ಪ್ರೇಮ ಲಹರಿ
ಕಾಣದ ವಿಧಿ ಬರಹ,
ಕೃಷ್ಣ ಪ್ರೀತಿಯಲ್ಲಿ ತುಂಬಿಹ ವಿರಹ,
ಯಾರಿದ್ದರೂ ಸನಿಹ,
ಆವರಿಸಲಿಲ್ಲ ರಾಧೆ ….
ಕೃಷ್ಣನ ಹೃದಯ ಬೇರಾರೂ
ನಿನ್ನ ವಿನಹ .
ಸಮೃದ್ಧಿಯ ಹೊತ್ತ ಕಾನನ,
ಜಗದೋದ್ಧಾರನ ವೃಂದಾವನ,
ಅದರೊಳಗೆ ಮುರಳಿಯ ಗಾನ,
ಹೇಗಾಗದಿರಳು ರಾಧೆ
ಜಗವ ಮರೆತು ಲೀನ ??.
ನಾರೀಮಣಿಯರ ಹೃದಯ
ದೊಳಗಡೆ ಸದಾ ಗಿರಿಧರನೇ ಒಡೆಯ,
ಮುನಿಸೇಕೆ ರಾಧೆ…..?
ಕಾಣೊಮ್ಮೆ ಈ ಸ್ತ್ರೀ ಲೋಲನ ಕಣ್ಣ ಕನ್ನಡಿಯ,
ನೀನೇ ತುಂಬಿರುವೆ ಚೆಲ್ಲುತಾ ಹೂನಗೆಯ.
ರಾಧೆಯೇ ಕೃಷ್ಣನ ಪ್ರೇಮ,
ಎತ್ತಿ ಬಂದರೂ ಹಲವು ಜನುಮ,
ಈ ಜೋಡಿಯ ಕಂಡು ಪಡದವರಾರು ಸಂಭ್ರಮ?,
ಈ ಪ್ರೇಮ ಸುಧೆಗೆ ಸಾಕ್ಷಿ
ಹುಣ್ಣಿಮೆಯ ಹಾಲ್ಬೆಳದಿಂಗಳ ಚೆಲ್ಲೋ ಆ
ಬಾನಂಗಳದ ಚಂದ್ರಮ.
ಸರಿಯೋ ಯುಗ ಯುಗಗಳಾಚೆಗೂ ಅಮರ,
ರಾಧಾ- ಮಾಧವರ ಪ್ರೇಮದಿಂಚರ,
ಕೊಳಲ ನಾದದಲೇ ಸೆಳೆಯೋ ಮೋಡಿಗಾರ,
ಅವನ ನೆನಪೂ ಆ ಲಹರಿಯಂತೆ
ಸಿಹಿ, ಮಧುರ.
– ನಯನ ಬಜಕೂಡ್ಲು
ಕೃಷ್ಣ- ರಾಧೆ….ಇವರ ನಡುವಿನ ಪ್ರೀತಿಯನ್ನು ಬಣ್ಣಿಸಿದೆ ಈ ಕವನ …..
ಅಭಿನಂದನೆಗಳು ನಯನಾರಿಗೆ….
Thank you (krishnaprabha) madam
super
ಕವನ ಬಹಳ ಉತ್ತಮವಾಗಿದೆ 🙂
Thank you ಶ್ರುತಿ ಅವರೇ
ಚಂದದ ಕವನ.
ಧನ್ಯವಾದಗಳು ಶಂಕರಿ ಮೇಡಂ