ಜಾಣನಾಗು
ನೀನು ಸುಂದರಿಯೆಂದು
ಕೃತ್ರಿಮ ಹೊಳಪು ಮತ್ತೇರಿ
ನೀ ಮೆರೆಯ ಬೇಡ
ಮೀರಿ ಜಂಬದಿಂದ ಕುಣಿಯ ಬೇಡ
ಅಂದ ಶಾಶ್ವತವಲ್ಲ
ಬಣ್ಣ ಶಾಶ್ವತವಲ್ಲ
ಹಣ ಶಾಶ್ವತವಲ್ಲ
ನಗೆ ಮುಖ ಶಾಶ್ವತವಲ್ಲ
ಅಂತಸ್ತು ಶಾಶ್ವತವಲ್ಲ
ಒಡ ಹುಟ್ಟಿದವರು ಶಾಶ್ವತವಲ್ಲ
ಬಂಧು ಬಳಗ ಶಾಶ್ವತವಲ್ಲ
ಎಂದಿಗೂ ರಕ್ಷೆ ಅಲ್ಲ!
ಇಲ್ಲ ಭವಿತೆ ನಿನ್ನ ಕೈಯಲ್ಲಿ
ಕರಗು ನಿನ್ನ ತಲ ಬರಹಗಳು
ಸೌಂದರ್ಯ ಮದವೇರಿ ಮಣ್ಣಾಗು
ಹಿಂದಿನ ಚರಿತ್ರಗಳು ಓದು!
ಏಕೆ ಅಷ್ಟು ಸೊಕ್ಕು
ಎಲ್ಲಾ ಕೊನೆಗೆ ಹಾಳಾಗು
ನೂರು ಎತ್ತು ತಿಂದ ಹದ್ದು
ಒಂದು ಬಿರುಗಾಳಿಗೆ ಬಿಳು
ಬಲಾಡ್ಯ ವೃಕ್ಷ ಚಿಕ್ಕ ಕೊಡಲಿ ಏಟುಗೆ ಬಾಗು
ಭವಿತ ಭವತೇವ್ಯಮ್……
.
.
ಗರ್ವದಿಂದ ಬಂಧುಬಳಗ ದೂರ ಮಾಡ ಬೇಡ
ಸುಖ ಜೀವನದ ಪರಿಮಳ ದುರ್ಗಂಧ ಮಾಡ ಬೇಡ
ಅವತಾರ ಮುಗಿದರೆ ಗಮ್ಯವಿಲ್ಲ
ಮಿತಿಯಿಲ್ಲದ ಸ್ವಾರ್ಧ ಯಾವಾಗಲೂ ಶಾಪವೇ
ಮನ್ಮಥ ರಾಜ್ಯ ಕೊನೆಗೆ ಮಣ್ಣುಪಾಲು
ತೋರಿದ ಪ್ರೀತಿ ತೋರುವೆ ಜಯವನ್ನು
ಆಲೋಚನೆಗಳು ಬದಲಾಯಿಸು
ಆವೇಶವನ್ನು ಬಿಡು
ವಿವೇಕವನ್ನು ಕಲಿ
ಇದೇ ಜೀವನದ ಗುರಿ
ಉಕ್ಕಿದರೇ ಸಾರಲ್ಲ
ಸೊಕ್ಕಿದರೆ ಹೆಣ್ಣಲ್ಲ ಎಂದು ಹೊಮ್ಮು!
– ಪ್ರಭಾಶಾಸ್ತ್ರಿ ಜೋಶ್ಯುಲ, ಮೈಸೂರ್.
.
.
ಕವಿತೆ ಅರ್ಥಗರ್ಭಿತ