ಹುದುಗಿಸಿಕೊ ಎನ್ನ ..
ನಸುಕಿನ ಆಹ್ಲಾದ ಮೌನದಿ
ಸಪ್ಪಳವ ಅಡಗಿಸಿದ ಮನದಿ
ಮಾತುಗಳ ಅಣಗಿಸಿದ ನಿಶ್ಯಬ್ದದಿ
ಶಬ್ಡಗಳ ಗದ್ದಲವಿರದ ಧ್ಯಾನದಿ
ನಿನ್ನೊಳಗಿನ ಮಧುರ ಸ್ವರವ
ಆಲಿಸಿ ಆನಂದಿಸುವ ಸುಸಮಯದಿ
ನಿನ್ನೊಳಗೆ ಲೀನವಾಗುವೆ ಕರಗಿ …
ಒಲ್ಲೆಯೆನದೆ ಒಪ್ಪಿಕೊ ದಯಮಾಡಿ
ಹುದುಗಿಸಿಕೊ ಅನಂತ ಚೇತನದ
ಅಲೆಗಳ ಒಳ ಪದರುಗಳಲಿ
ನಾಲ್ಕೇ ದಿನಗಳ ಬಾಳು ಮುಗಿಯುವುದರಲಿ ..
– ಭಾರತಿ ಪಿ.ಜಿ.
ಸವಿಜೇನಿನಂತೆ ಚಪ್ಪರಿಸಬೇಕಾದ ಮಧುರವಾದ ಕವನ. ಒಂದು ಹನಿ ಜೇನಿನ ಸಂಗ್ರಹಕ್ಕೆ ಹೇಗೆ ದುಂಬಿ ದಿನವಿಡೀ ಅಲೆದಾಡುವುದೋ ಹಾಗೆಯೇ ಜೀವಮಾನವಿಡೀ ಹೆಣಗಬೇಕಿಷ್ಟು ಆಧ್ಯಾತ್ಮ ಘನಿಸಬೇಕಾದರೆ. ಆ ಆಧ್ಯಾತ್ಮಿಕತೆಯ ಮಧುವನ್ನು ಸುಂದರ ಶಬ್ದಗಳಲ್ಲಿ ಕಟ್ಟಿಕೊಟ್ಟಿದ್ದೀರಿ, ಧನ್ಯವಾದಗಳು.