ಮುಂಜಾನೆ ಹಾಡು
ಕಡಲಿನಂಚಿನಲಿ ನಗುತ
ಉದಿಸಿರಲು ನೇಸರನು
ಅಲೆಗಳವನ ಪಾದಸ್ಪರ್ಶವ
ಮಾಡಿ ಧನ್ಯರಾಗಿಹರು ನೋಡ.
ರವಿತೇಜ ನಗುತಿರಲು
ಅಂಬರವು ರಂಗೇರಿ
ಅಕ್ಕರೆಯ ಬೆಳಗು
ಅವನಿಯೊಳಗಾಯ್ತು ನೋಡ.
ಹೂ ಹಸಿರ ಹಾಸನು ತಬ್ಬಿ
ನಲಿಯುತಿಹ ಇಬ್ಬನಿಯು
ಹೊಂಬಿಸಿಲ ಸ್ಪರ್ಶದೊಳು
ನಾಚಿ ನೀರಾಗಿ ಮರೆಯಾಯ್ತು ನೋಡ.
ಹೂಗಳರಳಿ ನಕ್ಕು ನಿಂತಿರಲು
ತಂಗಾಳಿ ಬೀಸಿ ಬರುತಿರಲು
ಹಕ್ಕಿಗಳು ಇಂಪಾಗಿ ಉಲಿಯುತಿರಲು
ತರುಲತೆಗಳು ತಲೆದೂಗಿ ನಿಂತಿಹವು ನೋಡ.
.
– ಅನ್ನಪೂರ್ಣ,ಬೆಜಪ್ಪೆ