ನವರಾತ್ರಿಯ ಸಡಗರ
ನವರಾತ್ರಿಯ ಸಡಗರ ಸಂಭ್ರಮಕೆ
ನೆಮ್ಮದಿಯ ನೀಡುತಲಿ ಮನಕೆ
ನವಚೈತನ್ಯ ಹರಿಸು ಬಾ ಮಾತೆ
ನವನಿಧಿದಾಯಿನಿಯೆ ತಾಯೆ||
ಮನೆಯ ಸಿಂಗರಿಸಿ ನಾವಿಲ್ಲಿ
ಮನದ ಕದ ತೆರೆದು ನಿನಗಾಗಿ
ಮಂದಾರಹೂ ಹಿಡಿದು ನಿಂತಿರುವೆವು
ಮಂಗಳಾಂಗಿಯೆ ಸುಮನಸ ತಾಯೆ||
ಹರನ ಪ್ರಿಯ ಸತಿಯಾದ ನಿನ್ನ
ಹರುಷದಲೆ ಪೂಜಿಪೆವು ನಿತ್ಯ
ಹರಸು ಬಾ ಹೃನ್ಮನಸ ಶಾರದೆಯೆ
ಹೇ ಹಂಸ ವಾಹಿನಿಯೆ ತಾಯೆ||
ದುಷ್ಟ ಶಕ್ತಿ ಸಂಹಾರಿಣೀ ರೂಪದಲಿ
ದಮನಿಸೆಮ್ಮೊಳಗಿನ ನಾನೆಂಬ ದುಷ್ಟನನು
ದಯೆತೋರಿ ಬಾ ಸಾಧುಜನಾಶ್ರಿತೆಯೆ
ದೇವಮುನಿ ವಂದಿತ ದುರ್ಗಾಮಾತೆ ತಾಯೆ||
– ಅನ್ನಪೂರ್ಣ,ಬೆಜಪ್ಪೆ.