ಕಂದೀಲಿನ ಬೆಳಕಿನಡಿ
ಕಾಲುದಾರಿಯ ಕಥನ
ಕೊನೆಯಿರದ ಪಯಣ
ಕಂದೀಲು ಬೆಳಕ ಕವನ
ನೆನಪುಗಳ ಕೆದಕಿದಾಗ
ನಿನ್ನೆಯ ಹಾದಿಯಲಿ
ನಾಳೆಗಳ ದೀಪಗಳು
ಲಾಟೀನು ಗಾಜು ಕಳಚಿ
ಲಕಲಕ ಹೊಳಪಾಗಿಸುತ
ಲಚ್ಚಿ ಪಕಪಕ ನಗುತ್ತಿದ್ದಳು
ಬಹುಮಹಡಿಗಳಡಿ
ಬದುಕು ಕಟ್ಟುವ ಎಡೆ
ಬೆಳಕಿಗೇಕಿನ್ನು ಲಾಂದ್ರ
ಹಳೆಮನೆ ಕೋಣೆಗೆ
ಹರಿಸಲೆಂದು ಬೆಳಕು
ಹಚ್ಚಿರುತ್ತಿದ್ದ ಕಂದೀಲು
ಮಾಯವಾದರೂ
ಮರೆಯಲಾಗದು
ಮನದೊಳಿಹುದು
ಹೊಸಹೊಸತೀಗ
ಹೊಳೆವ ಕಂಗಳಲಿ
ಹೊಂಗನಸ ದೀಪ
.
-ಗಣೇಶಪ್ರಸಾದ ಪಾಂಡೇಲು