ಮರಣ ಮನೆಯ ಮುಂದೆ ವರುಣ….
ಮರಣ ಮನೆಯ ಮುಂದೆ
ವರುಣನ
ಆರ್ಭಟ ..
ಮನೆಯೊಳಗಿನ ಮಂದಿಯ
ನೋವು
ಮರಣಿಸಿದವನ ಅನುಪಸ್ತಿತಿಯಲ್ಲ ..
ಮಣ್ಣು ಮಾಡಲು
ಬಿಡನೇ ಈ
ಸತ್ತ ಮಳೆರಾಯ ..
ಇಳೆಯ ತಣ್ಣಗಾಗಿಸುವ
ಮಳೆಗೂ
ಹಿಡಿಶಾಪ ..
ವರುಣನಿಗಲ್ಲದೆ
ಇನ್ನಾರಿಗೆ ಗೊತ್ತು …
ಮಳೆಯ ಪ್ರೀತಿಸುವ
‘ಕವಿ’ಯಿವನು ..
ಕಣ್ಮುಚ್ಚಿ
ಕವಿತೆ ಬರೆಯುತಿಹನು … .
ಬಾಳಪಯಣದ
ಕೊನೆಯಲೂ
ಸಂಭ್ರಮಿಸುತಲಿರುವನೆನುವುದು
ಮನೆಮಂದಿಗೆ ತಿಳಿದಿರದ ಸತ್ಯ … !!!
– ಕೆ. ಎ. ಎಂ. ಅನ್ಸಾರಿ