ಯಾವುದು ಕವಿತೆ?
ಕೋಗಿಲೆ ಹಾಡುತ್ತದೆ
ಬುದ್ದಿವಂತ ತಲೆದೂಗುತ್ತಾನೆ
ಅತಿಬುದ್ದಿವಂತ ತಲೆಕೆಡಿಸಿಕೊಳ್ಳುತ್ತಾನೆ ಹಾಡಿದ್ದು
ಯಾರಿಗಾಗಿ?
ಕತ್ತಿ ಬೀಸಿದರೆ
ಕತ್ತರಿಸುವುದು ಖಚಿತ
ಯಾರನ್ನೆಂದು ನಿರ್ದರಿಸಬೇಕಾದ್ದು ಹಿಡಿದ ಕೈಗಳೇ ಹೊರತು
ಕತ್ತಿಯೇನಲ್ಲ!
ಯಾವುದು ಕವಿತೆ
ಬರೆದ ಕವಿಯನ್ನೇ ಕೇಳಬೇಕು ಇಲ್ಲ ಓದುಗನನ್ನ
ಅತ್ತೆಯ ಪಾತ್ರ ನಿರ್ವಹಿಸುವ ವಿಮರ್ಶಕನಿಗೇನು ಕೇಳುತ್ತೀಯಾ?
ಸಹೃದಯತೆಯೇ ಕೊರತೆ!
– ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ