ಇಂದು ಜೂನ್ ಒಂದು ..
,
ಎರಡು ತಿಂಗಳು ಬೇಸಿಗೆಯ ರಜೆಯ ಮಜಾ ಅನುಭವಿಸಿ ಮಗದೊಮ್ಮೆ ಅಥವಾ ಮೊದಲ ಬಾರಿ ಶಾಲೆಯ ಮೆಟ್ಟಲೇರುವುದೆಂದರೆ ಒಂಥರಾ ಸಂತಸದ ಕ್ಷಣಗಳು ..
ಹೊಸ ತರಗತಿಯಲ್ಲಿ ಹಳೆಯ ಗೆಳೆಯರೊಡನೆ ಕೂರಲು ತಿಕ್ಕಾಟ, ಹೊಸ ಅಧ್ಯಾಪಕರ ನಿರೀಕ್ಷೆ.
ಹೊಸ ಬಟ್ಟೆ, ಹೊಸ ಛತ್ರಿ, ಹೊಸ ಚೀಲ, ಪುಸ್ತಕ , ಪೆನ್ನು, ಪೆನ್ಸಿಲು .. ಮನವ ತಣಿಸುವ ವಸ್ತುಗಳು.
ಆರಂಭದಲ್ಲಿ ಸಂಭ್ರಮ.
‘
ಮೊದ ಮೊದಲು ಜೋಪಾನವಾಗಿಟ್ಟರೂ ಕೊನೆಗೆ ನಾಯಿಬಾಲ …
ಹೊಸ ಪಠ್ಯ ಪುಸ್ತಕ ತೆರೆದಾಗ ಬರುವ ಸುವಾಸನೆ .. ಇನ್ನೂ ಮೂಗಿಗೆ ಬಡಿಯುತ್ತಿದೆ ..
ತಿಂಗಳುಗಳ ಹಿಂದೆ ಪುಟಗಳೆಡೆಯಲ್ಲಿ ಬಚ್ಚಿಟ್ಟ ನವಿಲು ಗರಿ .. ಇನ್ನೂ ಮರಿಹಾಕಿಲ್ಲ ವೆನುವ ನೋವು .. ಹತಾಶೆ.
ಹೊಸ ಚಪ್ಪಲಿ ಕಾಲಿಗೆ ಚುಚ್ಚಿ ಆದ ಗಾಯ ..
ಇನ್ನೂ ಒಣಗಿಲ್ಲವೆಂಬಂತೆ ನೋವು …
ಬುತ್ತಿಯಲಿ ತಂದಿದ್ದ ಊಟ ಉಪ್ಪಿನಕಾಯಿ .. ರುಚಿ ಇನ್ನೂ ನಾಲಿಗೆಯಿಂದ ಬಿಟ್ಟು ಹೋಗಿಲ್ಲ .. ..
ವರುಷಗಳುರುಳಿದರೂ ಇನ್ನೂ ಹಳಸಿಲ್ಲ ..
ಪಕ್ಕದ ಗೂಡಂಗಡಿಯಲ್ಲಿ ಸಿಗುತಿದ್ದ ಪೆಪ್ಪರುಮೆಂಟು .. ಎಳ್ಳಿನ ಉಂಡೆ ..
ಇನ್ನೂ ನೆನಪಿನ ಭರಣಿಗಳಲ್ಲಿ ಭಧ್ರವಾಗಿದೆ …
ಶಾಲೆಯ ಪಕ್ಕದಲ್ಲಿರುವ ಹೋಟೆಲಿನ ಗೋಳಿಬಜೆಯ(ಎಣ್ಣೆ ಖಾಧ್ಯ) ವಾಸನೆ ಇನ್ನೂ ಮೂಗಿಗೆ ಬಡಿಯುತ್ತಲಿದೆ ..
‘
.
ಸರಿ .. ಗಂಟೆ ನಾಲ್ಕಾಯಿತು .. ಈಗ ಕೇಳಿಸಬಹುದು ಘಂಟೆ ನಾದ ..ಕರ್ಣಕ್ಕೆ ಅಪ್ಪಳಿಸುತಿರಲು ಏನೊಂದು ಸಂಭ್ರಮ ..
ಚೀಲ ಹೆಗಲಿಗೆ ಹಾಕಿ ಓಡಿ ಮನೆ ಸೇರುವ ಧಾವಂತ ….ಪೀಂ ಪೀಂ … ಡುರ್ರ್ ……
ಜೀವನದ ಜಂಜಾಟದಲಿ ಮುಂದೆ ನಡೆಯುತ್ತಲೇ ಇರುವಾಗ ನೆನಪುಗಳು ಹಿಂದಿನಿಂದ ಕಚಗುಳಿಯಿಡುತ್ತಿವೆ ….
ಬಾಲ್ಯದ ನೆನಪುಗಳೇ ಹಾಗೆ ..ಅಂದು ಅನಿಸಿರಲಿಲ್ಲ ಮುಂದೊಮ್ಮೆ ಈ ಅನುಭವವನ್ನು ಮೆಲುಕು ಹಾಕಿ ಸಂಭ್ರಮಿಸಲಿರುವ/ ವ್ಯಥೆ ಪಡಲಿರುವ ದಿನಗಳು ಬರಲಿರುವುದೆನುವ ಕಟು ಸತ್ಯ … !!!!
.
– ಕೆ. ಎ. ಎಂ. ಅನ್ಸಾರಿ
.
ಚೆನ್ನಾಗಿದೆ ಸರ್. ಒಂದು ಕತೆಯ ಆರಂಭದ ಹಾಗೆ.
ಶಾಲೆ ರಜೆಯ ನಂತರ ಪ್ರಾರಂಭದ ದಿನಗಳ ಕುರಿತಾಗಿ
ತಾವು ನೀಡಿದ ಚಿತ್ರಣ ತುಂಬಾ ವಾಸ್ತವಿಕ ಹಾಗೂ ನೈಜ
ಚಿತ್ರಣವಾಗಿದೆ ,ನಮ್ಮ ಬಾಲ್ಯದ ಶಾಲಾ ದಿನಗಳ ಸವಿ ಸವಿ
ನೆನಪು ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಹೌದು! ಸುಂದರ ಬರಹ.. ಇದೆಲ್ಲದರ ಜೊತೆಗೆ ಆಟದ ಪೀರಿಯಡ್ ಗೆ ಕಾಯುವ ನೆನಪು ಕೂಡಾ ಇನ್ನೂ ಹಳತಾಗಿಲ್ಲ 😉
ಆಹಾ ಶಾಲೆಯ ನೆನಪುಗಳು ಸೂಪರ್