ನೃತ್ಯ
ಮೊಬೈಲ್ ರಿಂಗಣದಲಿ
ಅಂಗೈಯೊಳಗೆ ಲೋಕನೋಡಿ
ಮಗನ ಕಣ್ಣು ನರ್ತಿಸುತ್ತದೆ
ಕಂಪ್ಯೂಟರ್ ಚಾಲಾಕಿಗೆ
ವಿಶ್ವವನೆ ಮುಂದಿಟ್ಟ
ಮನಸು ಕುಣಿಯುತ್ತದೆ
ಟ್ಯಾಬು ಕೈಯೊಳಗೆ
ಪ್ರಪಂಚ ಬಹುದೂರವಿಲ್ಲ
ಅತಿ ಸುಲಭ ಎಲ್ಲವೂ
ಮೊಮ್ಮಗನ ಬಾಡಿ
ಡ್ಯಾನ್ಸ್ ಸೆಲ್ಫಿ ಲೋಕದಲ್ಲಿದೆ‘
ಅಮ್ಮನ ಕೈ ಬೆರಳುಗಳೂ
ನರ್ತಿಸುತ್ತವೆ
ಮೊಗ್ಗು ಬಿಡಿಸುವಾಗ
ಸೂಜಿಗೆ ದಾರ ಪೋಣಿಸುವಾಗ
ಮೊಮ್ಮಗಳ ಜಡೆ ಹೆಣೆಯುವಾಗ.
– ಸುನೀತಾ, ಕುಶಾಲನಗರ