ಕಣ್ಣ ಹನಿಯೊಂದು ಮಾತಾಡಿದೆ…
ಕಣ್ಣ ಹನಿಯೊಂದು ಮಾತಾಡಿದೆ,
ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ
ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ,
ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ.
ಬದುಕಿದ್ದರು ಉಸಿರೇ ಇಲ್ಲವಾಗಿದೆ,
ಅವಳನ್ನು ಪಡೆಯಲು ಹೃದಯು ತಪಸ್ಸಿಗೆ ಜಾರಿದೆ.
ಖುಷಿಯಲ್ಲಿಯೂ ನಗುವೇ ಮಾಯವಾಗಿದೆ,
ಅವಳ ಹುಡುಕಾಟದಲ್ಲಿಯೇ ಮಗ್ನನಾಗಿದೆ.
ಎಲ್ಲವನ್ನೂ ಪಡೆದರು ಏನೋ ಕಳೆದುಕೊಂಡ ಯಾತನೆ ಮನೆಮಾಡಿದೆ,
ಅವಳಿಲ್ಲದ ನೋವು ಎದೆಯಾಳದಲ್ಲಿ ಅಡಗಿದೆ.
ರಂಗುರಂಗಿನ ಬಣ್ಣಗಳಲ್ಲಿಯೂ ಮನದ ಬಣ್ಣವು ಕರಗಿದೆ,
ಅವಳನ್ನೇ ಬಯಸಿ ಪ್ರತಿಭಟನೆಯಲ್ಲಿದೆ.
ಬೆಳಕಿನಲ್ಲಿಯೂ ಕಣ್ಣಗಳಲ್ಲಿ ಅಂಧಕಾರವು ಆವರಿಸಿದೆ,
ಅವಳನ್ನು ಕಾಣುವ ಹಠದಲ್ಲಿ ಸೋತಿವೆ.
ಅಸುನೀಗುವ ಈ ವೇದನೆಗೆ ಕೊನೆಯಾದರೂ ಎಂದು.
ನನ್ನಿಂದಾದ ತಪ್ಪಾದರೂ ಏನೆಂಬುದು ತಿಳಯದಾಗಿದೆ.
– ನಾಗರಾಜ ಭದ್ರಾ