‘ಸ್ಮಾರ್ಟ್ ಕ್ಯಾಷ್’ e-ಪುಸ್ತಕ; ಕೇಶವ ಪ್ರಸಾದ್ ಬಿ. ಕಿದೂರು
ಮೂಲತಃ ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆಗೆ ಸಮೀಪದ ಕಿದೂರಿನವರಾದ ಶ್ರೀ ಕೇಶವ ಪ್ರಸಾದ್ ಬಿ. ವೃತ್ತಿಯಲ್ಲಿ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಣಿಜ್ಯ, ವೈಯಕ್ತಿಕ ಹಣಕಾಸು, ಸಂಸ್ಕೃತಿ, ಶಿಕ್ಷಣ ಇತ್ಯಾದಿ ಹತ್ತು ಹಲವು ವಿಚಾರಗಳಿಗೆ ಸಂಬಂಧಿಸಿ ನೂರಾರು ವರದಿ, ಲೇಖನಗಳನ್ನು ಬರೆದಿದ್ದಾರೆ.
ವಾಣಿಜ್ಯ ಸಂಬಂಧಿ ಬರಹಗಳನ್ನು ಬರೆಯುವುದು ಸುಲಭವಲ್ಲ, ಅದರಲ್ಲಿ ಕರಾರುವಾಕ್ಕಾದ ಮಾಹಿತಿ ಇರಬೇಕು, ಪ್ರಸ್ತುತ ವಿದ್ಯಮಾನಗಳಿಗೆ ಸ್ಪಂದಿಸುವಂತಿರಬೇಕು ಹಾಗೂ ಓದುಗರಿಗೆ ಹಣ, ಹೂಡಿಕೆ, ವಿಮೆ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ಲಭಿಸುವಂತಿರಬೇಕು. ಇಂಥ ಮಾಹಿತಿಗಳನ್ನು ಒದಗಿಸಲೆಂದು “ವಿಜಯ ಕರ್ನಾಟಕ ” ಪತ್ರಿಕೆಗಾಗಿ ಬರೆಯುತ್ತಿರುವ ಶ್ರೀ ಕೇಶವ ಪ್ರಸಾದ್ ಬಿ. ಅವರ ಲೇಖನಗಳನ್ನು, ನಮ್ಮ ಅಂತರ್ಜಾಲ ಪತ್ರಿಕೆ ‘ಸುರಹೊನ್ನೆ’ಯಲ್ಲಿ, ವೈವಿಧ್ಯತೆ ಮೂಡಿಸುವ ದೃಷ್ಟಿಯಿಂದ ‘ಸ್ಮಾರ್ಟ್ ಜಗತ್ತು’ ಎಂಬ ಅಂಕಣದಲ್ಲಿ ಪ್ರಕಟಿಸುತ್ತಾ ಬಂದಿದ್ದೇವೆ.
ಈ ವಿಭಾಗದಲ್ಲಿ ಮೂವತ್ತಕ್ಕೂ ಹೆಚ್ಚು ಲೇಖನಗಳು ಪ್ರಕಟವಾದ ಈ ಸಂದರ್ಭದಲ್ಲಿ, ಆ ಬರಹಗಳನ್ನು ಒಂದೇ ಸೂತ್ರದಲ್ಲಿ ಬಂಧಿಸುವ ಪ್ರಯತ್ನ ಇದು. ಹೀಗೆ ನಿಮ್ಮ ಮುಂದೆ ಬಂದಿದೆ ‘ ಸ್ಮಾರ್ಟ್ ಕ್ಯಾಷ್‘ e-ಪುಸ್ತಕ…..
– ಸಂಪಾದಕಿ