ಕಲ್ಲು
ಕೆತ್ತದೇ ಉಳಿದ ಕಲ್ಲು
ಬಯಲಲೇ ಬಿದ್ದು
ಬಿಸಿಲಲಿ ಬೆಂದು
ಇನ್ನಷ್ಟು ಕಪ್ಪಾಯಿತು
ಕೂತಲ್ಲೇ ಮುಪ್ಪಾಯಿತು
ಕೆತ್ತಿಸಿಕೊಂಡು ಶಿಲೆಯಾದ ಕಲ್ಲು
ಗರ್ಭಗುಡಿಯ ಮೂರುತಿಯಾಗಿ
ಕೀರುತಿ ಗಳಿಸಿ
ಆರತಿ ಅಭಿಷೇಕ
ದೂಪದೀಪಗಳ ಹೊಗೆಯಲ್ಲಿ
ಮೈಮರೆಯಿತು
ಮೆರೆಯಿತು
ಸ್ಥಾವರಕೆ
ಸಾಕ್ಷಿಯಾಯಿತು!
– ಕು.ಸ.ಮಧುಸೂದನ್ ರಂಗೇನಹಳ್ಳಿ
ಚೆನ್ನಾಗಿದೆ….