ಸ್ವಾತಿ ಮುತ್ತು… ಮಳೆ ನೀರು ಮಹತ್ತು…!!!

Share Button

 

ನಮ್ಮ ಹಿರಿಯರು ಸ್ವಾತಿ ನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಇತ್ತೀಚೆಗೆ ಒಂದು ದೈನಿಕ ಪತ್ರಿಕೆಯಲ್ಲಿ ಅದರ ಬಗ್ಗೆ ವಿವರವಾದ ಲೇಖನ ಪ್ರಕಟವಾಗಿದ್ದನ್ನು ಓದಿದಮೇಲೆ ನನ್ನ ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆ ನೀರನ್ನು ಸಂಗ್ರಹಿಸಿ ಇಡುತ್ತಿದುದು ನೆನಪಾಯಿತು. ಅದಕ್ಕಿರುವ ಔಷಧೀಯ ಗುಣಗಳನ್ನು ಈಗ ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಯಾರಿಗಿದೆ ಪುರುಸೊತ್ತು..??

ಈಗ ನಡೆಯುತ್ತಿರುವುದೇ ಸ್ವಾತಿ ನಕ್ಷತ್ರ..ಅಕ್ಟೋಬರ್ 24 ರಿಂದ ನವೆಂಬರ್ 5 ರ ತನಕ…ಈ ಮಧ್ಯೆ ಬೀಳುವ ಮಳೆ ನೀರನ್ನು ಶುಧ್ಧವಾಗಿ ಸಂಗ್ರಹಿಸುವುದೂ  ಒಂದು ನಾಜೂಕಿನ ಕೆಲಸ.ಮಳೆ ನೀರು ನೆಲಕ್ಕೆ ಬೀಳುವ ಮೊದಲೇ ಸ್ವಚ್ಛವಾದ, ಅಗಲವಾದ ತಾಮ್ರ, ಮಣ್ಣು, ಅಥವಾ ಸ್ಟೀಲ್ ಪಾತ್ರೆಯನ್ನು ಎತ್ತರ ಜಾಗದಲ್ಲಿಟ್ಟು ನೀರನ್ನು ಸಂಗ್ರಹಿಸಬೇಕು. ನಂತರ ಶುಧ್ಧ ಹತ್ತಿ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಇಟ್ಟರೆ ವರ್ಷಗಟ್ಟಲೆ ಹಾಳಾಗುವುದಿಲ್ಲ..!!

brass vessel

 

ಚಿಪ್ಪಿನೊಳಗೆ ಬಿದ್ದ  ಸ್ವಾತಿ ನಕ್ಷತ್ರದ ಮಳೆ ನೀರಿನ ಒಂದು ಹನಿಯಿಂದ ಅನರ್ಘ್ಯ ಮುತ್ತು ರೂಪುಗೊಳ್ಳುವುದು ನಮಗೆಲ್ಲಾ ಗೊತ್ತು. ಅದೇ ನೀರು ಕೆಲವು ರೋಗಗಳಿಗೂ ದಿವ್ಯ ಔಷಧಿಯಾಗಿರುವುದು ವಿಶೇಷವಲ್ಲವೇ..? ಸಣ್ನ ಪುಟ್ಟ ಕಣ್ಣು ನೋವಿಗೆ ಆಗಾಗ ಒಂದು ಬಿಂದು ನೀರು ಬಿಟ್ಟು ನೋಡಿ, ನೋವು ಶಮನ..! ಡಾಕ್ಟರ್ ಬಳಿ ಹೋಗಿ ಗುಣ ಕಾಣದ ಹಳೆ ಗಾಯಗಳು ಕೂಡಾ ಗುಣವಾದ ಬಗ್ಗೆ ಕೇಳಿ ಗೊತ್ತು. ಇನ್ನೂ ಒಂದು ವಿಶೇಷವೇನೆಂದರೆ, ಬೆಳೆಗಳಿಗೂ ಕೀಟ ನಿರೋಧಕವಾಗಿ ಈ ನೀರನ್ನು ಬಳಸಲ್ಪಡುತ್ತದೆ.

ಆದರೆ, ಹಿತ್ತಲ ಗಿಡ ಮದ್ದಲ್ಲವೆಂಬಂತೆ,ಸುಲಭವಾಗಿ,ಉಚಿತವಾಗಿ ಸಿಗುವಂತಹ ಈ ಸ್ವಾತಿ ನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವು  ಬಹಳ ಪ್ರಚಾರ ಪಡೆದಿಲ್ಲ. ಅಗ್ಗದ ಯೋಜನೆಗಳಿಗೆ ಕೋಟ್ಯಂತರ ಹಣ ವ್ಯಯಿಸುವ ನಮ್ಮ ಸರಕಾರ ಇದರ ಬಗ್ಗೆ  ಸ್ವಲ್ಪ ಗಮನ ಹರಿಸಿ ಸಂಶೋಧನೆ ನಡೆಸಿದರೆ ಇದರಲ್ಲಿರುವ ರೋಗ ನಿರೋಧಕ ಔಷಧೀಯ ಗುಣಗಳನ್ನು ಪತ್ತೆ ಹಚ್ಚಬಹುದು.ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಹಲವು ರೋಗಗಳಿಗೆ ಔಷಧಿ ಸಿಗುವ ಸಂಭವವಿದೆ. ಇನ್ನು ಮುಂದಾದರೂ ಸ್ವಾತಿ ನಕ್ಷತ್ರದ  ಮಳೆ ನೀರಿನ  ಉಪಯುಕ್ತತೆಯ ಕುರಿತು ಎಲ್ಲರಿಗೂ ಅರಿವುಂಟಾಗಿ ಅದರ ಸದುಪಯೋಗವಾಗಲಿ ಎಂದು ಹಾರೈಸೋಣವೇ..??

swati muttu

 

 – ಶಂಕರಿ ಶರ್ಮ, ಪುತ್ತೂರು

14 Responses

 1. Vasanth Shenoy says:

  Very very useful post.

 2. Radhika Krishnamurthy says:

  really informative…!

 3. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

  ಒಳ್ಳೆ ಬರಹ. ಸ್ವಾತಿ ಮಳೆ ನೀರಿನ ಸಂಗ್ರಹದ ಬಗ್ಗೆ, ಅದರ ಸಂಶೋಧನೆ ಬಗ್ಗೆ, ಸರಕಾರವೂ ಎಚ್ಚೆತ್ತುಕೊಳ್ಳಬೇಕೆಂಬ ಅಭಿಪ್ರಾಯ ಉಪಯುಕ್ತ ಸಲಹೆ.

 4. Shankari Sharma says:

  ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು…ಸ್ವಾತಿ ನಕ್ಷತ್ರ ನವಂಬರ ೬ರ ಬೆಳಿಗ್ಗೆ ೮:30 ವರೆಗೆ ಇದೆ. ನಿಮ್ಮೂರಲ್ಲಿ ಮಳೆ ಬಂದರೆ ಯಾಕೆ ತಡ…ಕೂಡಲೇ ಸಂಗ್ರಹಿಸಲು ಸುರುಮಾಡಿರಲ್ಲ…ನಾನು ೨ ಬಾಟಲಿಗಲ್ಲಿ ತುಂಬಿಸಿಟ್ಟಾಯಿತು..!!!

 5. Nanjunda Raju Raju says:

  Maahitigaagi dhanyavaadagalu.

 6. Manju Kiran says:

  Beautiful article…never knew it…

 7. Saroja Shekar says:

  ಉಪಯುಕ್ತ ಮಾಹಿತಿಗಾಗಿ ದನ್ಯವಾದಗಣಳು….

 8. savithri s bhat says:

  ಸ್ವಾತಿ ಮಳೆಯಲ್ಲಿ ಔಷಧೀಯ ಗುಣವಿರುವುದು ನನಗೆ ತಿಳಿದಿರಲಿಲ್ಲ .ಧನ್ಯವಾದಗಳು

 9. Shankari Sharma says:

  ಪ್ರೀತಿಯ ಸುರಗಿ ಹೂಗಳೇ, ನಿಮ್ಮೆಲ್ಲರಿಗೆ ಹೄತ್ಪೂರ್ವಕ ಕೄತಜ್ನತೆಗಳು..ನಮ್ಮ ಪ್ರೀತಿಯ ಮಾಲಾರಿಗೆ ವಿಶೇಷವಾದ ಧನ್ಯವಾದಗಳನ್ನು ಹೇಳಲೇ ಬೇಕು,ನನ್ನನ್ನು ಪ್ರೀತಿಯಿಂದ ಸುರಗಿ ಮಾಲೆಯಲ್ಲಿ ಪೋಣಿಸಿಕೊಂಡಿದ್ದಕ್ಕೆ…ಈ ಬರಹಕ್ಕೆ ಹೊಂದುವ ಚಿತ್ರಗಳನ್ನು ಸೇರಿಸಿ ಚೆನ್ನ್ಗಾಗಿಸಿದ್ದಾರೆ…ನನಗೇನೋ ನನ್ನ ಬರಹಕ್ಕಿಂತ ಅವರ ಸಂದರ್ಭೋಚಿತ ಚಿತ್ರಗಳೇ ಚೆನ್ನಾಗಿವೆ ಅನ್ನಿಸುತ್ತಿದೆ…!! ಧನ್ಯವಾದಗಳು ಮಾಲಾ…

  • Hema Hema says:

   ನಿಮ್ಮೆಲ್ಲರ ಪ್ರೋತ್ಸಾಹವೇ ಸುರಹೊನ್ನೆಗೆ ಶ್ರೀರಕ್ಷೆ..ಧನ್ಯವಾದಗಳು 🙂

 10. Ashwini Chintamani says:

  Good information medam

 11. Shankari Sharma says:

  ಸ್ವಾತಿ ಮಳೆ ನೀರಿನ ಮಹತ್ವವು ಸ್ವತಹ ಅನುಭವಕ್ಕೆ ಬರುವಂತಹ ಸುಯೋಗ ಒದಗಿ ಬಂದುದು ನಿಜವಾಗಿಯೂ ಕಾಕತಾಳೀಯ ಎನ್ನಿಸುವುದಿಲ್ಲ ನನಗೆ…ಎಡ ಕೈಯ ಕಿರುಬೆರಳಿನ ಉಗುರ ಬುಡದಲ್ಲಿ ಒಮ್ಮಿಂದೊಮ್ಮೆಲೆ ಕೆಂಪಾಗಿ ತುಂಬಾ ನೋವು ಸುರು..ತಿಂಗಳುಗಟ್ಟಲೆ ಔಷಧೋಪಚಾರ ನಡೆಯಿತೆನ್ನಿ.ಯಾವ ವೈದ್ಯರನ್ನೂ ಬಿಡಲಿಲ್ಲ..! ಎಲೊಪತಿ,ಹೊಮಿಯೊಪತಿ,ಆಯುರ್ವೇದ…ಏನನ್ನೂ ಬಿಡಲಿಲ್ಲ…ನೋವು ಜಪ್ಪಯ್ಯ ಅನ್ನಲಿಲ್ಲ.೬ತಿಂಗಳು ಕಳೆಯಿತು.ಕಣ್ಣಿಗೆ, ಒಳ್ಳೆಯದೆಂದು ದಿನಾ ಬೆಳೆಗ್ಗೆ ಎರಡೆರಡು ಬಿಂದು ಸ್ವಾತಿ ನೀರು ಹಾಕುತ್ತಿದ್ದೆ.ಆ ಬಾಟಲಿ ಎದುರಿಗೇ ಕುಳಿತು ನಗುತ್ತಿತ್ತು..!! ಹಾಂ..ಇದನ್ನು ಮರೆತೇ ಬಿಟ್ಟೆನಲ್ಲ ಎನಿಸಿತು.ಸಮಯ ಸಿಕ್ಕಾಗೆಲ್ಲಾ ಉಗುರಿನ ನೋವಿಗೆ ಹಾಕುತ್ತಾ ಬಂದೆ.ನಿಧಾನವಾಗಿ ನೋವು ಕಡಿಮೆಯಾಗಿ, ಆರೋಗ್ಯವಾದ ಉಗುರು ಬರಲು ಪ್ರಾರಂಭವಾಯಿತು.ಸರಿಯಾಗಿ ೨ವರೆ ತಿಂಗಳಲ್ಲಿ ಪೂರ್ತಿ ಉಗುರು ಸರಿಯಾಗಿ ಬಂದಿತ್ತು..!!ಈಗಂತೂ ನನಗೆ, ಹೆಮ್ಮೆಯ ಸ್ವಾತಿ ನೀರಿನ ಬಗ್ಗೆ, ನನ್ನ ಕಿರು ಬೆರಳು ತೋರಿಸಿ ಎಲ್ಲರಿಗೂ ಹೇಳುವುದೇ ಕೆಲಸ…!!!

 12. Shankara Narayana Bhat says:

  ಹೌದು, ಸ್ವಾತಿ ಮಳೆಯ ಮಹತ್ವ ಈಗಿನ ಕಾಲದಲ್ಲಿ ಯಾರಿಗೂ ತಿಳಿದಿಲ್ಲ. ಅದರ ಸಂಶೋಧನೆ ಆದರೆ ಒಳ್ಳೆದಕ್ಕು,

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: