Author: Nagesha MN, nageshamysore@yahoo.co.in
ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! ಸಿಂಗಾಪುರದ ಹಣ್ಣಿನ ಮಾರುಕಟ್ಟೆಯೊಳಗೆ ಕಾಲಿಟ್ಟೆ – ಅದೋ, ಅಲ್ಲೆ ಎದುರುಗಡೆಯೆ ಸ್ವಾಗತಿಸುತ್ತಾ ಕಾಣಿಸಿಕೊಂಡ ‘ಡ್ರಾಗನ್ ಹಣ್ಣು’ ಕೇಳಿತು, “ಯಾಕೆ, ನಾನಿಲ್ಲವೆ?” ಎಂದು. ‘ಸರಿ, ಇಂದು ನಿನ್ನಯ ಪಾಳಿ’ ಎಂದನ್ನುತ್ತಲೆ, ಕೈಗೊಂದೆರಡು ಕೆಂಗುಲಾಬಿ ಕೆಂಪಿನ...
ಚೀನಾದ ಈ ಗಿಜಿಗುಟ್ಟುವ ನಗರದ ಬೀದಿಯೊಂದರಲ್ಲಿ ಹಾದು ಹೋಗುವಾಗ ಸಿಕ್ಕಿದ್ದ ಹಣ್ಣಂಗಡಿಯತ್ತ ಸುಮ್ಮನೆ ಕುತೂಹಲಕ್ಕೆ ಕಣ್ಣು ಹಾಯಿಸಿದಾಗ ಕಂಡಿದ್ದು ಈ ಕೌತಕದ ವಸ್ತು. ಯಾವುದೋ ಅಪರೂಪದ ನಮ್ಮಲ್ಲಿ ಕಾಣ ಸಿಗದ ಹಣ್ಣೋ, ಕಾಯೋ ಇರುವಂತಿದೆಯಲ್ಲ ಎಂದು ಒಳಹೊಕ್ಕು ನೋಡಿದರೆ ನಿಜಕ್ಕೂ ವಿಶಿಷ್ಠವಾಗಿಯೆ ಇತ್ತು. ಸರಿ, ಅಲ್ಲೆ ಇದ್ದ...
ಐಟಿ ಜಗತ್ತಿಗೂ ಪ್ರಾಜೆಕ್ಟುಗಳಿಗು ಅವಿನಾಭಾವ ಸಂಬಂಧ. ಅದರಲ್ಲಿ ತೊಡಗಿಸಿಕೊಂಡವರಿಗೆಲ್ಲ ಪ್ರಾಜೆಕ್ಟಿನ ವಿಶ್ವರೂಪದ ವಿವಿಧ ಮುಖಗಳು ಪರಿಚಿತವೇ. ತಿಂಗಳು, ವರ್ಷಾನುಗಟ್ಟಲೆ ನಡೆಯುವ ಪ್ರಾಜೆಕ್ಟುಗಳ ಜೀವನ ಶೈಲಿಯಿಂದಾಗಿ ಅಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನ ಒಡನಾಟವುಂಟಾಗಿ ಎಷ್ಟೊ ಸಖ್ಯ, ಗೆಳೆತನಗಳು ಬೆಳೆಯುವ ಹಾಗೆಯೇ ಮತ್ಸರ, ವಿರಸ, ದ್ವೇಷಗಳ ಕೊಸರು ಉಳಿಸಿಹೋಗುವುದೂ ಉಂಟು....
(1) ಹೇಳಬಾರದು ಹೇಳಬಾರದ ಗುಟ್ಟ – ಕೇಳದ ನಿದ್ದೆ. (2) ಕದ್ದು ಕೇಳಿದ ಗುಲ್ಲು ರೋಚಕ ಸುದ್ಧಿ – ನಮ್ಮದಲ್ಲದ್ದು. (3) ಪಿಸುಗುಟ್ಟುತ ಯಾರಿಗೂ ಹೇಳಬೇಡ – ಎಂದು ನಕ್ಕಳು. (4) ಅಡಿಗೆ ಮನೆ ಕುಟುಂಬ ಸುದ್ಧಿ ಜಾಲ – ಸಮಯವಿಲ್ಲ. (5) ಮನೆಕೆಲಸ ಮುಗಿಸಿ ಹರಟುತ್ತ...
ಇದು ಮನಃ ಸತ್ವಗಳ ಮಾತು ಪಕ್ವಾಪಕ್ವ ಪ್ರಬುದ್ದ ಬಾಲಿಶ ನಡುವಳಿಕೆ ವ್ಯಕ್ತಿತ್ವದ ವ್ಯವಹಾರದಲುಂಟಂತೆ ಮೊತ್ತ ನಾವಾಡುವ ನಡೆನುಡಿ ಸಂಹಿತೆ ಸಮಸ್ತ.. ಏಯ್ ! ನೋಡಲ್ಲವನ ಕೀಟಲೆ ? ಕೂರು ಬಾರೋ ತೆಪ್ಪಗೆ ಸುಮ್ಮನೆ ಮೂಲೆ ಕೇಳಪ್ಪ ಹೇಳಿದ ಮಾತು ನಿನಗುತ್ತಮ ಮಂದೆ ದಿನವೆಲ್ಲ ನುಡಿದಾ ಪೋಷಕ ಶಾಲೆ.....
ನಾನು ಸರಿ, ನೀನು ಸರಿ ಇಬ್ಬರು ಸರಿ ಸರಾಸರಿ ಇರದಿದ್ದರೆ ದೂರ ದುಬಾರಿ ದೂರ ಸರಿವುದೆ ಸರಿ ದಾರಿ ! || ನೀನಿಲ್ಲ ಸರಿ, ನಾನಿಲ್ಲ ಸರಿ ಸರಿ..ಸರಿ ಆಕ್ರಂದನ ಭಾರಿ ಕಂದನ ಅಸಹಾಯಕತೆ ಪರಿ ಹುಟ್ಟಿದ ಗಳಿಗೆಯ ಸವಾರಿ.. || ನಾನಿಲ್ಲ ಸರಿ, ನೀವೆಲ್ಲ...
ಕನ್ನಡದಲ್ಲಿ ಪುಸ್ತಕಗಳು ಒಂದು ಮುದ್ರಣ ಕಾಣುವುದೆ ಕಷ್ಟ. ಹೆಚ್ಚು ಪುಸ್ತಕಗಳು ಅಚ್ಚಿನ ಮನೆಯ ಮುಖವನ್ನೆ ಕಾಣುವುದಿಲ್ಲ. ಅಂತದ್ದರಲ್ಲಿ ಪುಸ್ತಕವೊಂದು ಹತ್ತು ಬಾರಿಗೂ ಮೀರಿ ಮುದ್ರಣ ಭಾಗ್ಯ ಕಂಡಿದೆಯೆಂದರೆ ? ಖಂಡಿತ ಅದರಲ್ಲೇನೊ ವಿಶೇಷ ಇರಲೇಬೇಕು. ಹಾಗೆಂದುಕೊಂಡೆ ಬೆಂಗಳೂರಿಗೆ ಭೇಟಿಯಿತ್ತಾಗ ಕೊಂಡು ತಂದ ಪುಸ್ತಕ – ‘ಯೇಗ್ದಾಗೆಲ್ಲಾ ಐತೆ’. 25...
ಅಳು ಚೆನ್ನಾಗಿ ತೊಲಗಲಿ ಲವಣ ಉಳಿಸಿ ನೀರ || . ಕಂಬನಿ ಬಿತ್ತು ಉಪ್ಪು ಫಸಲ ಕೊಯ್ಲು ಕಣ್ಣಿನ್ನು ವಾಸಿ || . ಕಣ್ಣ ಹಡಗು ಲಂಗರು ರೆಪ್ಪೆಯಲಿ ಚಲಿಸೊಳಗೆ || . ಮಳೆ ಕಂಬನಿ ಹನಿ ಹನಿ ಸುರಿಯೆ ಇಳೆ ಕಂಪನಿ.. || . ಕಂಬಳಿ...
ಮನಸಲೆ ಮನಸಾಗುವೆ ನಾನು, ಹೇಳು ನೀ ಹೇಗಳಿಸುವೆ ನೀನು ? ಕನಸಲಿ ಕನಸ ಕದಿವೆನಿನ್ನು, ಕಾಣದೆ ಹೇಗಿರುವೆ ನೀನು ? ಹೃದಯದ ಬಡಿತಕು ತಪ್ಪಿಸುವೆ, ಲಯಬದ್ದ ನಿಯಮ ಕಾಡುವೆ ಪ್ರೀತಿಯ ಸೂರಗಲ, ಮೀರಿದರು ಸಂಯಮ || ಮನಸಲೆ || ತಪ್ಪೇನು ನನ್ನದೀ ಎದೆಯ, ಗಡಿಯಾರ ಸರಕು ಅಡವಿಟ್ಟು...
ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆತ್ನಿಸುತ್ತ. ಆ ಗಳಿಗೆಗದು ಕೆಲಸ ಮಾಡುವಂತೆ ಕಂಡರು ಬರಿ ಕೆಲ ಗಳಿಗೆಗಳಷ್ಟೆ; ಮತ್ತೊಂದೆರಡೆ ಕ್ಷಣದಲ್ಲಿ ಮತ್ತದೇ ಮರುಕಳಿಸಿ, ಈ ಬಾರಿ...
ನಿಮ್ಮ ಅನಿಸಿಕೆಗಳು…