ಬನ್ನಿ ಬಂಗಾರ
ಬನ್ನಿಯ ಕೊಡುತ
ಬಂಗಾರಾಗುವ
ಹಬ್ಬವು ಬಂದಿತು ನಾಡಿಗೆ!
ವಿಜಯ ದಶಮಿ
ದಸರಾ ಎಂದರೆ
ಹಿಗ್ಗಿನ ಬುಗ್ಗೆಯ ಹೋಳಿಗೆ!
ಎಲೆಕಾಯಿ ಬೇರು
ಮಣ್ಣಲಿ ಬೆರೆತು
ಗೊಬ್ಬರ ಆಗುತ ರೈತರಿಗೆ!
ಬಂಗಾರದಂತಹ
ಬೆಳೆಯ ತರುವುದು
ಸುಗ್ಗಿ ಕಾಲದ ಹೊತ್ತಿಗೆ!
ಒಕ್ಕಲು ಚಕ್ಕಡಿ
ಬಣಜಿಗ ತಕ್ಕಡಿ
ಚಮ್ಮಾರ ಹರಿತ ರೆಂಪಿಗೆ !
ಕಮ್ಮಾರ ಕುಲುಮಿ
ಕುಂಬಾರ ತಿಗುರಿ
ಎಲ್ಲವು ಯೋಗ್ಯ ಪೂಜೆಗೆ !
ಆಯುಧ ಪೂಜೆಯ
ಮಾಡುತ ನಲಿವರು
ರೈತ ಮಕ್ಕಳು ಒಟ್ಟಿಗೆ !
ಶಸ್ತ್ರವನೆಲ್ಲ
ಮರದಲ್ಲಿಟ್ಟ
ಪಾಂಡವರ ನೆನಪು ಬೆಚ್ಚಗೆ !
– ಚಂದ್ರಗೌಡ ಕುಲಕರ್ಣಿ, ವಿಜಯಪುರ ಜಿಲ್ಲೆ.
ನನ್ನ ಬನ್ನಿ ಬಂಗಾರ ಕವಿತೆ ಒಂದೇ ಅಕ್ಷರ ಸಾಲು ರೂಪದಲ್ಲಿ ಕಾಣುತ್ತದೆ ಹೀಗೇಕೆ?
ಮುಖಪುಟದಲ್ಲಿರುವುದು ಕವನದ ಪ್ರಥಮ ಕೆಲವು ಸಾಲುಗಳು ಮಾತ್ರ. Icon space ಗೆಂದು ಮೀಸಲಾಗಿರುವ ಅಕ್ಷರಗಳ ಮಿತಿಯಿಂದಾಗಿ ಹಾಗೆ ಕಾಣಿಸುತ್ತದೆ. ಸಾಲುಗಳ ಮಧ್ಯೆ ಇರುವ ಖಾಲಿ ಜಾಗವನ್ನು software ಪರಿಗಣಿಸುವುದಿಲ್ಲ. ಅದರ ಮೇಲೆ ಕ್ಲಿಕ್ ಮಾಡಿ. ಕವನದ ಪುಟ ಸರಿಯಾಗಿಯೇ ಇದೆ. ನಾಲ್ಕು ಪ್ಯಾರ ಗಳಲ್ಲಿ ಇದೆ.
ಕವನದ ಪುಟ ತೆರೆದ ಮೇಲೆಯೂ ಒಂದೇ ಸಾಲಿನಲ್ಲಿ ಕಾಣಿಸುತ್ತಿದೆಯಾದರೆ, ಬಹುಶ: ನಿಮ್ಮ ಕಂಪ್ಯೂಟರ್ ಗೆ ಇರುವ ಅಂತರ್ಜಾಲ ಸಂಪರ್ಕ ಬಹಳ ನಿಧಾನವಿರಬಹುದು. ಒಟ್ಟಾರೆಯಾಗಿ ಇದರಲ್ಲಿ ಸುರಹೊನ್ನೆಯ ತಾಂತ್ರಿಕ ಸಮಸ್ಯೆ ಇಲ್ಲ.
ಕವಿತೆ ಚೆನ್ನಾಗಿದೆ..