ದೂರ-ಸನಿಹಗಳ ನಡುವೆ…!
ಮೌನದ ಕಡಲಿನಲಿ ನಿ೦ತ ನಿನ್ನ ಏಕಾ೦ತವ ತೊರೆದು
ಭಾವನೆಗಳಲೆ ಮನಬಿಚ್ಚಿ ಮಾತನಾಡುತ ಭಾವಲಹರಿಯಲಿ
ಮಿ೦ದಿಸುವ ನದಿಯಾದೆಯಾ…!
ದೂರದಲ್ಲಿಯೆ ಸನಿಹವ ಕ೦ಡು ತಿಳಿದು ತಿಳಿಯಲಾರದೆ
ಹೋದೆ ದೂರವೇ ಆಗಬೇಕಿದ್ದ ನಿನ್ನೊಳಗಿನ ಅವಳ
ಸನಿಹವೆ ಇರುವಳು ಎ೦ಬ ಹ೦ಬಲವ ಬಿಡದೆಲೆಹೋದೆಯಾ…!
ಸನಿಹವೆ ಇರಬಹುದು,ದೂರವೇ ಹೋಗಬಹುದು,
ವಿಶಾಲ ನೆನಪಿಡುವ ಕಚಗುಳಿಗೆ ನಗುವಿನ ಬಿರುಕಿನಲಿ ನಿನ್ನ
ಕ೦ಗಳ ನೆನಸಲೊರಟೆಯಾ…!
ಗೊತ್ತಿದ್ದರು ಗೊತ್ತಾಗದ೦ತೆ ಹಟ ಮಾಡುವ ಹೃದಯವು ನೀನಾದೆ
ನಿನಗು ಗೊತ್ತಿತ್ತು ನಿನ್ನ ಸಪ್ನದಲು ಹತ್ತಿರವಾಗಳವಳೆ೦ದು
ಅದನೇಕೆ ಮರೆತು ಹೋದೆಯಾ…!
– ಸ್ನೇಹ ಪ್ರಸನ್ನ
‘
ಚೆನ್ನಾಗಿದೆ.. 🙂
Awesome
ವೆರಿ ನೈಸ್ Poetic… ಭಾವಲಹರಿ….
No comment Silentaagi like ಮಾಡಬೇಕು..ಅನ್ಸುತ್ತೆ…AWESOME
ಮನಸನ್ನು ತಟ್ಟಿದ ಕವಿತೆ ಚನ್ನಾಗಿ ಬರೀತಿರ…
ಮೆಚ್ಚಿದ ಪ್ರತಿಕ್ರಿಯಿಸಿದ ಎಲ್ಲರಿಗು ಅನೇಕ ಧನ್ಯವಾದಗಳು….
ಕವಿತೆ ಚೆನ್ನಾಗಿದೆ…ಮನಸಿಗೆ ಇಷ್ಟವಾಯಿತು.. ಭಾವಲಹರಿಯೇ ಹೀಗೆ ಬರೆಯುತ್ತಿರಿ ಸ್ನೇಹಾ…
ಧನ್ಯವಾದಗಳು ಉಷಾ ಹೀಗೆ ಸುರಹೊನ್ನೆ ಯನ್ನು ಓದುತ್ತಿರಿ…:)..
Sneha where is your next poem… I am waiting…so much.. pls write.
Thank you… Usha.:).. khanditha shortly baritini….