e-ಕಲಿಕೆಗೆ ಕೈ ಜೋಡಿಸಿ Please..
ಸರಕಾರಿ ಶಾಲೆಯಲ್ಲಿ ಓದಿರುವವನು ನಾನು. .6ನೇ ತರಗತಿಯಲ್ಲಿ English ಓದಲು ಬರದೆ ಕನ್ನಡದಲ್ಲಿಯೇ ಬರೆದು ಓದಿ teacherಗೆ ಮೋಸ ಮಾಡಿದವನು ನಾನು. . ಉರು ಹೊಡೆದ English ಮರೆತು ಹೋಗದಿರಲೆಂದು. ತಲೆಕೆಳಗೆ ನಿಂತು ನೆನಪುಮಾಡಿಕೊಂಡವನು ನಾನು. SSLC ಪರೀಕ್ಷೆಯ ಹಿಂದಿನ ದಿನ ಓದಿದ ಉತ್ತರ ನೆನಪಾಗದೆ ಅಮ್ಮನ ತಬ್ಬಿಹಿಡಿದು ಗೊಳೋ ಎಂದು ಅತ್ತವನು ನಾನು. PUC ಯಲ್ಲಿ English ಮಾತಾಡೋ ಗೆಳಯ ಗೆಳತಿಯರ ನಡುವೆ. . is ಹಾಕ್ಬೇಕೊ was ಹಾಕ್ಬೇಕೋ ಎಂದು ಗೊತ್ತಾಗದೆ ಎಷ್ಟೋ ಸಲ ಮೌನಿಯಾದವನು ನಾನು. Convent ಒಂದರಲ್ಲಿ teach ಮಾಡೋಕೆ ಹೋಗಿ. English ಮಾತಾಡೋ studentsನ್ನ ಎದುರಿಸಲಾಗದೆ, ನನ್ನೊಳಗೆ ಕುಸಿದವನು ನಾನು. .
ನನಗೊತ್ತಿದೆ ಇದು ನನ್ನೊಬ್ಬನ ಅನುಭವವಲ್ಲ. .ಕನ್ನಡ ಶಾಲೆಯಲ್ಲಿ ಓದಿದ ಹೆಚ್ಚಿನವರ ಅನುಭವವಿದು. ಅದೇ ಕಾರಣಕ್ಕೆ ಸಾಲ ಮಾಡಿಯಾದರು ಸೈ ನಮ್ಮ ಮಕ್ಕಳು English ಮಾತನಾಡಲಿ ಎಂದು .Conventಗೆ ಕಳಿಸುತಿದ್ದಾರೆ. . ಹಾಗಂತ ಸರಕಾರಿ ಶಾಲೆಗಳೇನು ಖಾಲಿಯಾಗಿಲ್ಲ. ಖಾಲಿಯಾಗುವುದು ಇಲ್ಲ. ಹಸಿದ ಹೊಟ್ಟೆಯ, uniform ಬಿಟ್ಟು 3ನೆಯದೊಂದುಜೊತೆ ಬಟ್ಟೆಯಿಲ್ಲದ, ರಾತ್ರಿಯಿಡಿ ಕುಡಿದು ಜಗಳ ಮಾಡುವ ತಂದೆ, ಶಾಲೆಗೋಗೋದು ಯಾಕೆಂದೆ ತಿಳಿಯದ ಅಮ್ಮ, Current ಇಲ್ಲದ. TV ಇರದ. ಮನೆಯ ಅದೆಷ್ಟೋ ಕನಸು ಕಣ್ಕ್ಗಳ ಮಕ್ಕಳು ಸರಕಾರಿ ಶಾಲೆಯಲ್ಲಿದ್ದಾರೆ. .
ಆತ್ಮಿಯರೆ. .
ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಾಕಾರಿಗಳಾದ ಶಶಿಧರ್ ಜಿ.ಎಸ್ ಇವರು # e-ಕಲಿಕೆ# ಅನ್ನುವ ವಿನೂತನ ಯೋಜನೆಯೊಂದನ್ನ ಜಾರಿಗೆ ತರುತಿದ್ದಾರೆ. ಆಯ್ದ ಶಾಲೆಗಳಲ್ಲಿ ಒಂದರಿಂದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ Spoken English ಕಲಿಸುವ ಯೋಜನೆ ಇದಾಗಿದ್ದು, ದಾನಿಗಳ ನೆರವನ್ನು ಪಡೆದು, ಗೌರವ ಸಂಭಾವನೆ ನೀಡಿ ಶಿಕ್ಷಕರೊಬ್ಬರನ್ಮ ನೇಮಿಸುವ ಮತ್ತು ಅಗತ್ಯ materials ನೀಡುವ ಮೂಲಕ English ಕಲಿಸುವ ದೊಡ್ಡ ಸಾಹಸ ಇದಾಗಿದೆ.
ಹಲವಾರು ದಾನಿಗಳು ನಮ್ಮ ಜೊತೆಯಾಗಿದ್ದಾರೆ. ಇಷ್ಟೆಲ್ಲ ಕಷ್ಟ ಪಟ್ಟು ಇಂಗ್ಲೀಷ್ ಮಾತನಾಡಲು ಕಲಿಸುವ ಅಗತ್ಯವೇನಿದೆ ಎಂದರೆ .ಖಂಡಿತ. .ನಮ್ಮ ಬಳಿ ಉತ್ತರವಿಲ್ಲ. ದೇಶದ ಭವಿಷ್ಯದಲ್ಲಿ ಪ್ರತಿ ಮಗುವಿನ ಪಾಲು ದೊಡ್ಡದಿದೆ ಎಂದು ನೀವು ನಂಬುತ್ತೀರಿ ಅನ್ನುವುದಾದರೆ ನಮ್ಮ ಜೊತೆ ಕೈ ಜೋಡಿಸಿ. ಒಂದು ಮಗುವನ್ನಾದರು ದತ್ತು ತೆಗೆದು ಸಹಕರಿಸಿ ಒಂದರ್ಥದಲ್ಲಿ ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನವೂ ಇದಾಗಲಿದೆ ( Spoken English ಕುರಿತು ನಿಮಗಿರುವ ಅರಿವನ್ನು ನಮ್ಮಜೊತೆ ದಯವಿಟ್ಟು ಹಂಚಿಕೊಳ್ಳಿ) .Please join with us.
ಅಂದಹಾಗೆ ಹೇಳೋಕೆ ಮರೆತೆ ನಾನೀಗ ಒಬ್ಬ English RP. . !!!
ಸಂಪರ್ಕ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಪುತ್ತೂರು ತಾಲೂಕು
ದ.ಕ
8762938626 ( BEO Sir)
ಮಾಹಿತಿಗಾಗಿ
9741669646 (Prashanth)
9481460546 (Vimal)
– ವಿ.ಕೆ.ನೆಲ್ಯಾಡಿ
ಕಲಿಕೆಯ ಕೀಲಿಕೈ ಒಳ್ಳೆಯ ವಿಚಾರ. ಖಂಡಿತವಾಗಿ ನಿಮ್ಮೊಂದಿಗೆ ನಾನಿದ್ದೇನೆ.ಯಾವದಾದರೂ ಶಾಲೆಯ ಒಂದು ಮಗುವಿನ ಕಲಿಕಾ ವೆಚ್ಚದ ಬಗ್ಗೆ ತಿಳಿಸಿ.ನಿಮ್ಮ ಕಾರ್ಯ ನಿರಾತಂಕವಾಗಿ ನಿರಂತರ ನಡೆಯಲಿ.ಶುಭಾಶಯಗಳು