ಮುಸ್ಸಂಜೆಯ ಮೌನ..!
ತಿಳಿ ಮುಸ್ಸಂಜೆಯು ಮಳೆಯನು ತಂದಾಗ
ಸುಯ್ಯನೆ ತಂಗಾಳಿ ಹಿತವಾಗಿ ಬೀಸುವಾಗ
ಮೌನವಾಗಿ ಸ್ಪರ್ಶಿಸಿದ ಹನಿಗಳಿಗೇಕೋ
ನರ್ತಿಸುವ ಚಿಂತೆ…
ತಂಪಾದ ಚೆಲುವಲಿ ಮೊರೆಯಿಟ್ಟು
ಬಿಡಿಬಿಡಿಯಾಗಿ ಭುವಿಯನು ಮುಟ್ಟಿ
ಕೆಣಕುವಾಗ ಹೊಂಗೆಯ ಎಲೆಗಳಲಿ
ಹನಿಗಳದೆ ಸಂತೆ…
ಕತ್ತಲೆ ಕವಿಯುವ ಮುನ್ನ ಸ್ವಲ್ಪ
ಚೆಂದದ ಬೆಳಕಲೆ ಹುಡುಕಲಾರದೆ
ಹೋದೆ ನಾನು ನನ್ನ..!
ಕ್ಷಣಕ್ಷಣವು ಆ ಸಂಜೆಯು ಸೌಂದರ್ಯಕ್ಕೆ
ಸಲುಗೆ ನೀಡಿ ಕಳೆದುಕೊಳ್ಳುವಂತೆ
ಮಾಡಿತೆನ್ನ..!
ಬರೆಯುವ ಹಂಬಲಕೆ ಶರಣಾಗಿ ಹೊರಟಿತು
ಲೇಖನಿಯ ಪಯಣ
ಸವಿಸಂಜೆಯ ರವಿ ಮುಳುಗುವ ವೇಳೆ
ಅಗೋ ಬರಿಯ ಮೌನ ,ಸೊಗಸಿನದೇ ಧ್ಯಾನ…!
– ಸ್ನೇಹಾ ಪ್ರಸನ್ನ, ಮೈಸೂರು
ಚನ್ನಾಗಿದೆ..
🙂 🙂
Nice one.. 🙂
ಧನ್ಯವಾದಗಳು