ಉತ್ತರ ಹೊಳೆಯದ ಪ್ರಶ್ನೆಗಳು ಕೆಲವು
ನಮ್ಮೊಳಗಿನ ಗೊಂದಲಗಳು ಹತ್ತು ಹಲವು
ಎದೆ ಬಡಿತವನ್ನು ಹೆಚ್ಚಿಸುವುದು ನೋವು
ಎಲ್ಲವನ್ನೂ ಎದುರಿಸಿ ನಿಂತಾಗಷ್ಟೇ ಗೆಲುವು
ಸೋಲು ಗೆಲುವಿನಾಚೆ ಇದ್ದೇ ಇದೇ ಬದುಕು
ದುಡುಕಿನ ನಿರ್ಧಾರದಿಂದ ಆಗುವುದು ಕೆಡುಕು
ಸೋಲಿನಾಚೆಗೂ ಇದೆ ಹೊಸ ಹೊಸ ಸಾಧ್ಯತೆ
ಹುಡುಕುವುದಕ್ಕೆ ಕೊಡಬೇಕು ನಾವು ಆದ್ಯತೆ
ಆ ಕ್ಷಣದ ಸೋಲು ಎಂದಿಗೂ ಸೋಲಲ್ಲ
ಪರಾಮರ್ಶೆ ಮಾಡದೇ ಇದ್ದರೆ ಗೆಲುವಿಲ್ಲ
ಗೆಲುವು ಹಿಂದಿಂದೆ ಇಣುಕಿ ನೋಡುವುದು
ಅದನ್ನೊಲಿಸುವ ಪ್ರಯತ್ನ ಮಾಡುವುದು
ಸೋತು ಸುಣ್ಣವಾದಾಗ ಅಂಜಬಾರದಿಲ್ಲಿ
ಮರಳಿ ಪ್ರಯತ್ನವ ಮಾಡುತ್ತಿರಬೇಕಿಲ್ಲಿ
ಯಾವುದೇ ಒಂದು ಕೆಲಸದಿ ಸೋಲಬಹುದಿಲ್ಲಿ
ದಿಟ್ಟ ಹೆಜ್ಜೆಯನಿಟ್ಟು ಜೀವನದಿ ಗೆಲ್ಲಬೇಕಿಲ್ಲಿ
ತಾಳ್ಮೆಯೊಂದೇ ಇಲ್ಲಿ ಕ್ಷಣಿಕ ಬದುಕಿಗೆ ಆಧಾರ
ಯಾವುದಕ್ಕೂ ಮಾಡಿಕೊಳ್ಳಬಾರದು ಅತಿ ಬೇಸರ
ಕಾಯಬೇಕಷ್ಟೇ ನಾವು ಮಾಡಿಕೊಳ್ಳದೆ ಅತ್ಯವಸರ
ಕತ್ತಲ ಸರಿಸಿ ಮೂಡುವನು ಮತ್ತೊಂದೆಡೆ ನೇಸರ

ನಾಗರಾಜ ಜಿ. ಎನ್. ಬಾಡ, ಕುಮಟ


ಸರಳ ಸುಂದರ ಕವನ ಸಾರ್…
ಸದಾಶಯ ಹೊಂದಿರುವ ಕವನ ಸ್ಪೂತಿದಾಯಕವಾಗಿದೆ.
ಗೆಲುವು ಮತ್ತು ಸೋಲಿನ ಬಗ್ಗೆ ಸುಂದರವಾದ ಕವನ
ಸುಂದರ ಕವನ