ಬೆಳಕು-ಬಳ್ಳಿ

ಶಾಲೆ ಬಂದ್ ಆದ್ಮ್ಯಾಲೆ

Share Button

ಶಾಲಿ ಹತ್ರಾ ಇರೋ
ಬಿಸ್ಕತ್, ಚಾಕ್ಲೇಟ್ ಮಾರೋ ಅವ್ವಂಗೆ
ವ್ಯಾಪಾರ ಇಲ್ದ ಬಾಯಿ ಮುಚ್ಕೊಂಡು ಗಪ್ ಚುಪ್ ಆಗ್ಯಾಳ.

ಬಿಸ್ಕತ್ ಚೂರುಗಳು ಸಿಗ್ದೇ
ಇರುವೆಗಳೆಲ್ಲಾ ಕ್ಲಾಸ್ ರೂಮ್ ತುಂಬಾ
ಹುಡುಕಾಟ ಮಾಡಾಕತ್ತಾವ.

ನಳಾ ಹತ್ರಾ ಅನ್ನದ ಮೆತ್ತಗಿನ ಅಗುಳು ಇಲ್ದ
ಶಾಲಿ ಅಕ್ಕ-ಪಕ್ಕದ ಮರದ್ಮ್ಯಾಗಲ
ಕಾಗೆಗಳೆಲ್ಲಾ ಹಾರಿ ಹೋದವ.

ಗೇಟ್ ಹೊರಗ ಒಂದೆರಡು ನಾಯಿಗಳು
ಒಂದ್ ಮಗ್ಗಿಲಿಗೆ ಒರಗಿ
ಬಾಲ ಆಡ್ಸೋದನ್ನೇ ಮರ್ತ ಹೋದವ.

ಕಿಚಕಿಚ ಅನ್ದೋ ಶಾಲಿ ಮೈದಾನ
ಎಲಿ ಉದ್ರಿದ ಅಡವಿ ಹಂಗ ಬೋಸಿ ಹೋಗೈತಿ.

ಮಕ್ಕಳನ್ನ ಕಳ್ಕೊಂಡ್ ಅಳೋ ತಾಯಿ ಹಂಗ
ಶಾಲಿ ಈಗ ಬೋ ಅಂತ ಅಳಾಕತ್ತದ.

ತೆಲುಗು ಮೂಲ: ದಗ್ಗುಮಾಟಿ ಪದ್ಮಾಕರ್
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್

4 Comments on “ಶಾಲೆ ಬಂದ್ ಆದ್ಮ್ಯಾಲೆ

  1. ತಿಳಿಯಾದ ಹಾಸ್ಯದೊಳಗೆ ವಾಸ್ತವಿಕತೆಯ ಚಿತ್ರ ಣದ ಕವಿತೆ ಚೆನ್ನಾಗಿ ದೆ..ಮೂಲ ಲೇಖಕರು..ಹಾಗೂ ಅನುವಾದಕಾರರಿಗೆ ಅಭಿನಂದನೆಗಳು…

  2. ಚೆಂದದ‌ ಭಾಷಾಂತರ
    ನಮ್ಮ ಸರ್ಕಾರಿ ಶಾಲೆಗಳ ಚಿತ್ರಣ ನೀಡಿದ ಕವಿಗಳಿಗೆ ವಂದನೆಗಳು

  3. ಚಿಣ್ಣರಿಂದ ತುಂಬಿದ ಶಾಲೆಯ ಅಂಗಳ ನೀಡುವ ಸುಖವನ್ನು ಅವರಿಲ್ಲದ ನೀರವತೆಯೊಂದಿಗೆ ಹೋಲಿಸಿ ವಿವರಿಸಿರುವ ಪರಿ ಅನನ್ಯ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *