ಅಮ್ಮ ಎನ್ನುವ ಪದವೇ ಅತ್ಯಂತ ವಿಶಿಷ್ಟ
ಅಮ್ಮ ಎಂದರೆ ಎಲ್ಲರಿಗೂ ತುಂಬ ಇಷ್ಟ
ಅಮ್ಮ ಜೊತೆಯಲ್ಲಿರಲು ಬಾರದು ಕಷ್ಟ
ಅಮ್ಮ ಕಟ್ಟಿ ಕೊಡುವಳು ಭವ್ಯ ಭವಿಷ್ಯ
ಉಸಿರಿಗೆ ಉಸಿರ ನೀಡುವಳು ಅಮ್ಮ
ಹೊತ್ತು ಹೆತ್ತು ಸಲಹುಹಳು ಅಮ್ಮ
ಸಂಸ್ಕಾರ ನೀಡಿ ಬೆಳೆಸುವಳು ಅಮ್ಮ
ಸಂಸಾರದ ನೊಗಕ್ಕೆ ಹೆಗಲಾಗುವಳು ಅಮ್ಮ
ನೆಮ್ಮದಿಯ ನೀಡುವುದು ಅಮ್ಮನ ಮಡಿಲು
ಅಮ್ಮನೆಂದರೆ ಪ್ರೀತಿ ಕರುಣೆಯ ಕಡಲು
ಅಮ್ಮ ಜಗದೆಲ್ಲಾ ದೇವರಿಗಿಂತಲೂ ಮಿಗಿಲು
ಅಮ್ಮನ ಸನಿಹದಲಿ ಕರಗುವುದೆಲ್ಲ ದಿಗಿಲು
ಅಮ್ಮನ ಕುರಿತು ಹೇಳಲು ಪದಗಳೆ ಸಿಗದು
ನಮ್ಮಯ ಪಾಲಿನ ದೇವತೆಯೇ ಅವಳು
ಈ ಬಾಳನ್ನು ಬೆಳಗುವ ಬೆಳಕು ಅವಳು
ಹೆಜ್ಜೆ ಹೆಜ್ಜೆಗೂ ನಮ್ಮ ತಿದ್ದಿ ಬೆಳೆಸುವಳು
ಅಮ್ಮss ಎಂದಾಗ ನೆಮ್ಮದಿಯ ಸಂಚಲನ
ಸದಾ ಚಿರಋಣಿಗಳಾಗಿ ಸಲ್ಲಿಸಬೇಕು ನಮನ
ವೃದ್ಧಾಪ್ಯದಲ್ಲಿ ಕೊಡಬೇಕು ಹೆಚ್ಚಿನ ಗಮನ
ಸಾರ್ಥಕಪಡಿಸಿಕೊಳ್ಳಬೇಕು ನಮ್ಮಯ ಜೀವನ
-ನಾಗರಾಜ ಜಿ. ಎನ್. ಬಾಡ


ಭಾವನಾತ್ಮಕ
ಕವನ ಚೆನ್ನಾಗಿದೆ ಪೂರಕ ಚಿತ್ರವಂತೂ ಸೂಪರ್ .ಚಿತ್ರ ಹಾಕಿರುವ ಸಂಪಾದಕರಿಗೆ ಧನ್ಯವಾದಗಳು
ಅಮ್ಮ ಎನ್ನುವ ಪದವೇ ಭಾವನಾತ್ಮಕ! ಅವಳ ಕುರಿತು ಬರೆಯ ಹೊರಟರೆ ಪದಗಳಿಗೆ ಬರುವುದು ಕುತ್ತು! ಅವಳೇ ಮಕ್ಕಳೆಲ್ಲರ ತಾಕತ್ತು!
ಅಮ್ಮನಿಗೆ ಅಮ್ಮನೇ ಸಾಟಿ, ಅಮ್ಮನ ಪ್ರೀತಿಗೆ ಎಣೆಯುಂಟೆ? ಸೊಗಸಾಗಿದೆ ಕವಿತೆ. ಪೂರಕ ಚಿತ್ರವಂತೂ ಮನಸೆಳೆಯುವಂತಿದೆ.