ಫಲ
ಕಡಿದರೂ ಚಿಗುರೊಡೆವ ಮರದಂತೆ ಇರು
ನೊಂದ ಬಾಳಿಗೆ ಸಾಂತ್ವನದ ಕಲ್ಪತರು
ಇರುವುದ ನೀಡಿ ನೀನು ಹಿಗ್ಗುತಿರು
ಅನಂತದಿ ಬೆರೆತು ನೀ ಅನಂತವಾಗಿರು
ಒಂದೇ ತತ್ವವು ಎದುರು ಇರದಿರಲಿ
ಒಳಿತ ಸ್ವೀಕರಿಸುವ ಗುಣ ನಿನ್ನದಾಗಿರಲಿ
ಆಗಸದ ವಿಶಾಲತೆ ನಿನಗೆ ಅರಿವಿರಲಿ
ಸೋಲಿನ ಪಾಠವ ಬದುಕು ಮರೆಯದಿರಲಿ
ದುಡಿಮೆಯ ಬೆಲೆಯ ಕಾಯವು ತಿಳಿಯಲು
ಬೆಳಕಾಗುವುದು ನಿನ್ನ ಬದುಕ ಬಯಲು
ಅಂತರಂಗದ ಕದವ ಸತ್ಯವು ಮುಟ್ಟಲು
ಇರುಳು ಕಾಡದು ಬರಿಯ ಹಗಲು
ಬಾಹ್ಯ ನೋಟಕೆ ಜೀವನ ಹಣ್ಣಾಗದು
ಕೈಕಟ್ಟಿ ಕುಳಿತರೆ ಕಾಲ ಬದಲಾಗದು
ನಿನ್ನದಲ್ಲದ ಫಲವು ನಿನಗೆ ಒಲಿಯದು
ಬೀಜ ಬಿತ್ತದೆ ಫಸಲು ಬರದು
–ನಿರಂಜನ ಕೆ ನಾಯಕ, ಮಂಗಳೂರು
ಚೆನ್ನಾಗಿದೆ ಕವನ
ಸೊಗಸಾದ ಕವನ
ಧನ್ಯವಾದಗಳು
ಕಡಿದರೂ ಚಿಗುರೊಡೆವ ಮರ………..ಆರಂಭ ಚೆನ್ನಾಗಿದೆ.
ಇಂಥ ಪ್ರತಿಮೆ ಪ್ರತೀಕಗಳ ಮೂಲಕ ಮಾತಾಡುವಂತಾಗಲಿ.
ಶುಭಹಾರೈಕೆಗಳು ಸರ್.
ಉತ್ತಮ ಸಂದೇಶಯುಕ್ತ ಕವನ ಚೆನ್ನಾಗಿದೆ.
ಸಂವೇದನಾಶೀಲ ಕವನ ಸುಂದರವಾಗಿವೆ.
ಉತ್ತಮ ರಚನೆ