ಅಯೋಧ್ಯ ಬಾಲ ರಾಮ

Share Button

ಶ್ರೀರಾಮ ನಿನ್ನ ನಾಮ
ಅನವರತ ಶುಭಕಾಮ/
ಸಲಹು ಕಾರುಣ್ಯರಾಮ
ಸುಜನಾ ಪಟ್ಟಾಭಿರಾಮ//

ಅಲ್ಲಿ ನೋಡೇ  ಮಂದಿರ
ಅದರಲಿ  ಬಾಲರಾಮ ಚಂದಿರ
ಕೌಸಲ್ಯಾ ನಂದ ಸುಂದರ
 ಭುವಿಗೆ  ಚೆಂದದ   ಇಂದಿರ//.

ಕಂಡು  ಧನ್ಯನಾ ಇಂದು
ಭವ್ಯ ದೃಶ್ಯ ಕಣ್ಣಲಿ
ಬಾಲ ರಾಮ ನಿಂತ
ಸುಂದರ ಗುಡಿಯಲಿ//.

ಕರುಣಿಸು ಕರುಣಾಮಯಿ
ಭಕ್ತವತ್ಸಲ ಶ್ರೀರಾಮ/
ನಿನ್ನ ನಾಮ ಸ್ಮರಣೆಯಲಿ
ಮನವ ನೆಲೆಗೊಳಿಸೋ
ಅಯೋಧ್ಯ ರಾಜಾ  ರಾಮ//.

ಜಾನಕಿ ಪ್ರಿಯ ರಾಮ
ಪಿತೃವಾಕ್ಯ ಪಾಲನ ರಾಮ/
ರಾವಣ ನಾಶಕ ಸುಗ್ರೀವ ಪಾಲಕ
ಹನುಮತ್ಸೇವಿತ ಕೋದಂಡರಾಮ//.

ಮರ್ಯಾದ ಪುರುಷೋತ್ತಮ ರಾಮ
ರಾಜನೀತಿ ವಿಶಾರದ ರಾಮ/
ಏಕಪತ್ನಿ  ಏಕಬಾಣ ಬದ್ಧರಾಮ
ವಿಷ್ಣು ಅಂಶ ಸಂಭೂತ ಶ್ರೀರಾಮ//.

ದುಷ್ಟ ಜನ ನಾಶಕ
ಶಿಷ್ಟ ಜನ ಪಾಲಕ
ಅವತಾರ ಪುರುಷ
ಕೌಸಲ್ಯಾ ನಂದನ ಶ್ರೀ ರಾಮ/

ತ್ರೇತಾಯುಗ ಅಮರ
ರಾಮನಿಂದ ಪಾವನ
 ಕಲಿಯುಗಕೂ ಕೃಪೆಯಾಯ್ತು
 ಅಭಯ ರಾಮನಾಮ//.

-ಎನ್. ಶಂಕರ ರಾವ್. ಬೆಂಗಳೂರು.

5 Responses

  1. ಸರಳ ಸುಂದರ ಕವನ..ಸಾಂದರ್ಬಿಕವಾಗಿದೆ..

  2. ವಿದ್ಯಾ says:

    ಭಕ್ತಿ ಪೂರ್ಣ ವಾಗಿದೆ

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ಶಂಕರಿ ಶರ್ಮ says:

    ರಾಮನಿಗರ್ಪಿತ ಸಕಾಲಿಕ ಭಕ್ತಿಗೀತೆ ಚೆನ್ನಾಗಿದೆ.

  5. ಪದ್ಮಾ ಆನಂದ್ says:

    ರಾಮನಾಮ ಸ್ಮರಣೆಯನ್ನು ಎಷ್ಟು ಮಾಡಿದರೂ ಸಾಲದು, ಜೈ ಶ್ರೀರಾಮ್.‌ ಸುಂದರ ಕವಿತೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: