ಚಳಿಗಾಲದಲ್ಲಿ ವಿಶೇಷ ಆರೈಕೆ
ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ನಿಧಾನವಾಗಿ ಆರಂಭವಾಗುವ ಒಣ-ಚಳಿ ಹವೆಯು ಫೆಬ್ರವರಿ ತಿಂಗಳ ವರೆಗೂ ಇರುತ್ತದೆ. ಈ ಸಮಯದಲ್ಲಿ ಚಳಿ ಹಾಗೂ ಶುಷ್ಕತೆಯಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.
ಚಳಿಗಾಲದ ಚರ್ಮದ ಸಮಸ್ಯೆಗೆ ಮನೆಯಲ್ಲೇ ಒಂದು ಉಪಚಾರ ಸುಲಭವಾಗಿ ಮನೆಯಲ್ಲೇ ಹೇಗೆ ಚರ್ಮವನ್ನು ಕಾಪಾಡಿಕೊಳ್ಳುವುದು ಎಂದು ತಿಳಿಸಿಕೊಡುತ್ತೇನೆ. ಮೊದಲ ಉಪಾಯ ಮುಖದ ಚರ್ಮಕ್ಕೆ ಸ್ವಲ್ಪ ಲಿಂಬೆ ಹಣ್ಣಿನ ರಸ, ಎರಡು ಹನಿ ಜೇನುತುಪ್ಪ, ಅರಿಶಿನ, ಹಾಲಿನ ಕೆನೆ ಬೆರೆಸಿ ನಿಧಾನವಾಗಿ ಮಸಾಜ್ ಮಾಡಿ ತೊಳೆಯಿರಿ. ಚರ್ಮದ ಕಾಂತಿ ಮತ್ತು ಹೊಳಪು ಹೆಚ್ಚುವುದರ ಜೊತೆಗೆ ತೇವಾಂಶ (Moisture) ಕೂಡ ಸಿಗುತ್ತದೆ.
ಬ್ಯೂಟಿ ಟಿಪ್ಸ್ : ಸ್ನಾನ ಮಾಡಿದ ತಕ್ಷಣ ಟವಲ್ ನಲ್ಲಿ ಮೈ ಒರೆಸಿದ ನಂತರ ಮಾಯಿಸ್ಚರೈಸರ್ ಇರುವ ಕ್ರೀಮ್‌ಗಳನ್ನು ಬಳಸಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಿ. ನಂತರ ತುಂಬುತೋಳಿನ ಬಟ್ಟೆಗಳನ್ನು ಧರಿಸಿ.
ಪಾದಗಳ ಸುರಕ್ಷತೆ : ಬಿರುಕುಪಾದಗಳನ್ನು ಸ್ವಚ್ಛಗೊಳಿಸಿ. ತುಂಬಾ ಬಿರುಕು ಇದ್ದರೆ ಕ್ರಾಕ್ ಕ್ರೀಮ್ (Crack Cream)ಗಳನ್ನು ಬಳಸಿ ರಾತ್ರಿ ಹೊತ್ತು ಮಲಗುವಾಗ ಕಾಲುಚೀಲವನ್ನು (Socks) ಹಾಕಿಕೊಂಡು ಮಲಗಿ. ಹೊರಗಡೆ ಹೋಗುವಾಗ ಸಾಕ್ಸ್ ಬಳಸಿ ಮತ್ತು ಹೊರಗಿಂದ ಬಂದ ತಕ್ಷಣ ಪಾದಗಳನ್ನು ಸ್ವಚ್ಚವಾಗಿ ನೀರಿನಿಂದ ತೊಳೆಯಿರಿ.
ಕ್ರೀಮು ಉಪಯೋಗಿಸದೆ ಇರುವವರು ಮನೆಯಲ್ಲಿ ಇರುವ ಹಾಲಿನ ಕೆನೆ, ಅರಿಶಿನ ಪುಡಿ ಒಂದು ಹನಿ ಜೇನುತುಪ್ಪ ಇವುಗಳನ್ನು ಮಿಶ್ರ ಮಾಡಿ ಹಚ್ಚಿ ನಂತರ ತಣ್ಣೀರಿನಲ್ಲಿ ತೊಳಿಯಿರಿ . ಕಾಂತಿಯು ಹೆಚ್ಚುತ್ತದೆ ಹಾಗೂ ಬಿರುಕು ಕಡಿಮೆ ಆಗುತ್ತದೆ.
ಕೂದಲಿನ ಆರೈಕೆ ತುಂಬಾ ಒಣಗಿದ ಹಾಗೆ ಕಾಣುವುದು/ಕೂದಲು ಬಿರುಕು ಬಿಡುವುದು: ಈ ಸಮಸ್ಯೆಯಿಂದ ಬಗೆಹರಿಯಲು ನೀವು ಯಾವುದೇ ಹೇರ್ ಆಯಿಲ್ ಅದನ್ನು ಸ್ವಲ್ಪ ಬೆಚ್ಚಗೆ ಮಾಡಿ ಚೆನ್ನಾಗಿ ಕೂದಲಿನ ತುದಿಯವರೆಗೂ ಹಚ್ಚಿ ಒಂದು ದಿನ ಬಿಡಿ. ನಂತರ ಬೆಚ್ಚಗಿನ ನೀರನ್ನು ತೊಳೆಯಿರಿ ಕೂದಲಿನ ಹೊಳಪು ಹೆಚ್ಚುತ್ತದೆ ಮತ್ತು ಕೂದಲು ಸುರಕ್ಷಿತವಾಗಿರುತ್ತದೆ.
ಚಳಿಗಾಲದಲ್ಲಿ ತುಂಬಾ ಜನರಿಗೆ ಕೂದಲು ಶುಷ್ಕವಾಗುವುದು ಮತ್ತು ತಲೆಹೊಟ್ಟು (Dandruff) ಜಾಸ್ತಿಯಾಗುವುದು ಆಗುತ್ತದೆ. ಕೂದಲಿಗೆ ತೆಂಗಿನ ಹಾಲು ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಹೊಟ್ಟು ಕಡಿಮೆ ಆಗುತ್ತದೆ.
ತುಟಿಗಳ ಆರೈಕೆಗೆ ಉತ್ತಮ ಬ್ರಾಂಡ್ ನ ಲಿಪ್ ಗ್ಲೋಸ್ (Lip Gloss) ಬಳಸಿ. ಲಿಪ್ ಗ್ಲೋಸ್ ಬಳಸದೆ ಇರುವವರು ತುಪ್ಪ, ಹಾಲಿನ ಕೆನೆ, ಬೆಣ್ಣೆ ಅಥವಾ ಇತರ ಅಡುಗೆ ಎಣ್ಣೆಗಳನ್ನು ಹಚ್ಚಬಹುದು.
-ಮಂಗಳಾ, ಮೈಸೂರು
ಉಪಯುಕ್ತ ಸಲಹೆಗಳು.
ಬಹಳ ಉಪಯುಕ್ತ ವಾದ ಮಾಹಿತಿಗಳು ಮಂಗಳಕ್ಕ…. ಹೆಣ್ಣು ಮಕ್ಕಳಿಗೆ ಚಳಿಗಾಲಕ್ಕೆ ಬೇಕಿರುವ ಚರ್ಮ ಮತ್ತು ಕೇಶ ಸಂರಕ್ಷಣೆಯ ಮಾಹಿತಿಗಳನ್ನು ತುಂಬಾ ಸರಳ ಮತ್ತು ಅರ್ಥ ವಾಗುವ ರೀತಿಯಲ್ಲಿ ವಿವರಿಸಿದ್ದೀರಿ. ತುಂಬು ಹೃದಯದ ಧನ್ಯವಾದಗಳು
Very useful tips . Thanks Mangalaji
Very useful tips
Well explained and thanks for giving home remedies
ಉತ್ತಮ ಸಲಹೆಗಳನ್ನು ಇತ್ತಿರುವ ನಿಮಗೆ ಧನ್ಯವಾದಗಳು ಮೇಡಂ..
ನಿನ್ನ ಬರಹ ಚೆನ್ನಾಗಿದೆ. ನೋಡಿ ತುಂಬಾ ಖುಷಿಯಾಯ್ತು. ಒಳ್ಳೇದಾಗಲಿ.
ಶಾಂತಕ್ಕ
ಉಪಯುಕ್ತ ಮಾಹಿತಿಗೆ ಧನ್ಯವಾದಗಳು
ಸಕಾಲಿಕ ಸೂಕ್ತ, ಉಪಯುಕ್ತ ಸಲಹೆಗಳಿಗಾಗಿ ಧನ್ಯವಾದಗಳು.