ಸೂರ್ಯೋದಯ
ತನಗಗಳು
ಅರಳಿವೆ ಕುಸುಮ
ಹರಡಿ ಘಮಘಮ
ರವಿರಶ್ಮಿಯ ನಭ
ಹೊಸದಿನ ಆರಂಭ
ಹೊಳೆಯಲು ತರಣಿ
ಥಳಥಳ ಕಿರಣ
ಹೊಸದಿನ ಉದಯ
ಇನ್ನಿಲ್ಲ ತಮ ಭಯ
ತೊಳೆದು ತಮ ಕೊಳೆ
ಬೆಳಗಲೆಂದು ಇಳೆ
ಸದಾ ವ್ಯಸ್ತ ಈ ಸೂರ್ಯ
ನಿಲಿಸನೆಂದೂ ಕಾರ್ಯ
ಕತ್ತಲ ತೆರೆಯನು
ಸರಿಸುತ ಉದಯ
ಮೆಲ್ಲ ಬರುತಿಹನು
ನೋಡು ಧರೆ ಗೆಳೆಯ
ಹೊರಡೆ ಸೂರ್ಯರಥ
ಹಕ್ಕಿಯುಲಿ ಸಂಗೀತ
ಕರ್ಣಕೆ ರಸಾಮೃತ
ಬೆಳಗಿನ ಪ್ರಗಾಥ
ತಿಮಿರದ ಪರದೆ
ಕಿರಣ ಸರಿಸಿದೆ
ಇಣುಕುತ ಆದಿತ್ಯ
ಬರೆಸಿಹ ಸಾಹಿತ್ಯ
–ಸುಜಾತಾ ರವೀಶ್
ನನ್ನ ತನಗಗಳನ್ನು ಪ್ರಕಟಿಸಿದ್ದಕ್ಕೆ ಸಂಪಾದಕರಿಗೆ ಧನ್ಯವಾದಗಳು.
ಹೊಸ ಪ್ರಕಾರದ…ಕವನ.ಚೆನ್ನಾಗಿ ಮೂಡಿಬಂದಿದೆ ಸೋದರಿ
ಚೆನ್ನಾಗಿವೆ
ನವ ಪ್ರಕಾರದ ತನಗ ಮೆಚ್ಚುಗೆಯೆನಿಸಿತು.
ಪದಗಳ ಪ್ರಯೋಗ ನವೀನ ಪ್ರಯತ್ನದಲ್ಲಿ ಮೂಡಿದೆ. ಚೆನ್ನಾಗಿದೆ ಮೇಡಂ