ನೆನಪು:ಮೂಡಬಿದ್ರೆಯ ನುಡಿಸಿರಿ ಹಾಗೂ ವಿರಾಸತ ಅದ್ಭುತ ಕಾರ್ಯಕ್ರಮಗಳು
ದಕ್ಷಿಣ ಕರ್ನಾಟಕದ ವಿದ್ಯಾಕಾಶಿ ಮೂಡಬಿದ್ರೆ ಯಲ್ಲಿ ಪ್ರತಿವರ್ಷ ಡಿಸೆಂಬರ್. ಜನೆವರಿ ಯಲ್ಲಿ ನಡೆಯುವ ಮೇಲಿನ ಎರಡು ಕಾರ್ಯಕ್ರಮಗಳಿಗೆ ಅವ್ಯಾಹತವಾಗಿ 10 ವರ್ಷ ಹಾಜರಾಗಿ ಅತೀ ಆನಂದ ಪಟ್ಟವರಲ್ಲಿ ನಾನೂ ಒಬ್ಬ. ವಿಶಾಲ ಮೈದಾನ, ಬಹು ಅಂತಸ್ತಿನ ಕಾಲೇಜ್ ಕಟ್ಟಡಗಳು, ನದಿ, ಬೆಟ್ಟಗಳ ಹೆಸರುಳ್ಳ ಹಾಸ್ಟೆಲ್ಲುಗಳು ಮತ್ತು ಇವಗಳ ಮಧ್ಯ ಸಾಹಿತ್ಯ. ಸಂಗೀತ. ನಾಟಕ ಮುಂತಾದ ಪ್ರೊಗ್ರಾಮ ಮಾಡಲು ನಿರ್ಮಿಸಿದ ವಿವಿಧ ಅದ್ಭುತ ರಂಗಮಂಚಗಳು.
ಇಡೀ ಕ್ಯಾಂಪಸನ್ನು ವಿದ್ಯುದ್ದೀಪಗಳ ಅಲಂಕಾರ ಮಾಡಿ ಝಗ ಮಗಿಸುವoತೆ ಮಾಡಿ,ಇಂದ್ರಲೋಕವನ್ನೇ ಧರೆಗಿಳಿದಂತೆ ಮಾಡಿದ ಈ ಮಾಯಲೋಕವನ್ನು ಎಷ್ಟು ವರ್ಣಿಸಿದರೂ ಸಾಲದು. ಇವೆರಡು ಕಾರ್ಯಕ್ರಮದ ರೂವಾರಿ ಸದಾ ಹಸನ್ಮುಖಿ, ಶ್ರೀ ಮೋಹನ ಆಳ್ವಾಜಿಯವರ ಅವಿರತ ಶ್ರಮ, ಇವರ ಕಾರ್ಯವೈಖರಿ, ಸಮಯಪಾಲನೆ ವರ್ಣನಾತೀತ. 3 ರಿಂದ 4 ದಿನ ಏಳೆಂಟು ಸ್ಟೇಜು ನಿರ್ಮಿಸಿ, ಬೆಳಗಿನ 5 ರಿಂದ ರಾತ್ರಿ 11 ರ ವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳು. ವೇಳೆಗೆ ಸರಿಯಾಗಿ ಚಾಚೂ ತಪ್ಪದಂತೆ ನಡೆಯುತ್ತವೆ.
ಮೊದಲದಿನ ಪಲ್ಲಕ್ಕಿಯಲ್ಲಿ ಸಭಾಧ್ಯಕ್ಷರ ಮೆರವಣಿಗೆ ಹಾಗೂ ವಿವಿಧ ಗಣವೇಷಧಾರಿಗಳ ಕವಾಯಿತು.ನಗಾರಿ ಡ್ರಮುಗಳ ವಾದನ ಒಂದೇ ಎರಡೇ… ನೋಡಲು ಎರಡೂ ಕಣ್ಣುಗಳು ಸಾಲದು. ಧ್ವಜಾರೋಹಣದ ನಂತರ ಭತ್ತದ ತೆನೆಗೆ ಹಾಲು ಹಾಕಿ ಸಮಾರಂಭದ ಉದ್ಘಾಟನೆ. ಇವೆಲ್ಲಾ ಕಾರ್ಯಕ್ರಮಗಳಿಗೆ ಖಾವಿಂದರಾದ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆಜಿ ಯವರ ಉಪಸ್ಥಿತಿ, ಎಲ್ಲವನ್ನು ನೋಡುವ ಸೌಭಾಗ್ಯ ನಮಗೆ ದೊರೆತದ್ದು ಪುಣ್ಫಫಲ ಅಲ್ಲವೆ?.
ಪ್ರತಿವರ್ಷ ಸಂಗೀತ ದಿಗ್ಗಜರು ಭಾಗವಹಿಸುವ ಮುಂಜಾನೆಯ ಉದಯರಾಗ ಕೇಳಲು ಸೂರ್ಯ ಉದಯದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮಗಳು, ಸಾಹಿತ್ಯದ ವಿವಿಧ ಪ್ರಕಾರ, ನಾಟ್ಯ. ನೃತ್ಯ. ಹಾಸ್ಯಉತ್ಸವ. ಲಘು ಸಂಗೀತ.ಹೆಸರಾಂತ ಸಾಹಿತಿಗಳಿಂದ ಬೇಸರ ಬರದಂಥ. ಮನಮುಟ್ಟುವ ಭಾಷಣ. ಯಕ್ಷಗಾನ. ಮುಂತಾದ ಕಾರ್ಯಕ್ರಮಗಳು ಇವೆಲ್ಲಗಳ ಮಧ್ಯ ಸಮೀಚಿನವಾದ ಬೆಳಗಿನ ತಿಂಡಿ. ಎರಡೂ ಹೊತ್ತಿನ ಸವಿ ಸವಿ ಊಟ, ನೋಡಲು ಆಗಮಿಸಿದ ಸಾವಿರಾರು ಜನರಿಗೆ ಇರಲು ವ್ಯವಸ್ತೆ. ಮಾಡುತ್ತಿರುವ ಶ್ರೀ ಮೋಹನಜಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸೋಣ. ಈ ಎಲ್ಲ ಕಾರ್ಯಕ್ರಮಗಳಿಗೆ ನಾವು ನೀಡುವ ಶುಲ್ಕ ಕೇವಲ ನೂರು ರೂಪಾಯಿಗಳು ಮಾತ್ರ.
ಈ ಎಲ್ಲ ಕಾರ್ಯಕ್ರಮಗಳಿಗೆ ಭಾಗವಹಿಸಲು ನಮಗೆ ಪ್ರೇರಣೆ ನೀಡಿದವರು ಮೈಸೂರಿನ ಶ್ರೀ ಕೆ. ನಂಜುಂಡಸ್ವಾಮಿಯವರು. ಅವರನ್ನು ನೆನೆಯೋಣ. ಹುಬ್ಬಳ್ಳಿಯಿಂದ ನನ್ನೊಬ್ಬನಿಂದ ಪ್ರಾರಂಭವಾದ ಈ ಸಾಹಿತ್ಯದ ಸಂಭ್ರಮ ಪ್ರತಿವರ್ಷ ಹೆಚ್ಚಾಗುತ್ತಾ ವಿವಿಧ ಭಾಗಗಳಿಂದ ಕಾರು. ವ್ಯಾನು. ಕೊನೆಗೆ 40 ಜನರ ಬಸ್ ಮಾಡಿಕೊಂಡು ಹೋಗಿ ಬಂದಿದ್ದೇವೆ . ಅಲ್ಲದೆ ಸುತ್ತ ಮುತ್ತಲಿನ ಸಾವಿರ ಕಂಭದ ಜೈನ ಬಸದಿ, ಉಡುಪಿ, ಅಶ್ವತಪುರ. ಕಟೀಲು. ಕದ್ರಿ ಮoಗಳೂರ ಹೊಸನಾಡು. ಶ್ರೀoಗೇರಿ. ಹೊರನಾಡು ಆಗುಂಬೆಯ ಸೂರ್ಯಾಸ್ತ ಮುಂತಾದ ಸ್ಥಳಗಳನ್ನು ನೋಡಿ ಆನಂದಪಟ್ಟೆವು.
ಕುದುರೆಮುಖದಲ್ಲಿ ನೌಕರಿ ಮಾಡಿದ ಸರ್ವವಿದ್ಯಾ ಪಾರಂಗತ ಶ್ರೀ ದತ್ತಣ್ಣ ನಾಡಗೀರ ಅವರು ಈ ಎಲ್ಲಾ ಸ್ಥಳ ತೋರಿಸಲು ನಮಗೆ ಗೈಡ್ ಆಗಿದ್ದರು. ಆದ್ರೆ ಅವರು ಈಗ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೊರೋಣ. ಕರೋನ ಮಾರಿ- ಯಿಂದಾಗಿ ಎರಡು ವರ್ಷಗಳಿಂದ ಈ ಹಬ್ಬಕ್ಕೆ ಅಡಚಣೆಯಾಗಿದ್ದು ಮುಂಬರುವ ವರ್ಷಗಳಲ್ಲಿ ಇನ್ನೂವಿಜೃಂಭಣೆಯಿಂದ ಜರುಗಲಿ ಎಂದು ಆ ದೇವನಲ್ಲಿ ಪ್ರಾರ್ಥಿಸುತ್ತ ಲೇಖನಕ್ಕೆ ವಿರಾಮ ನೀಡುತ್ತಿದ್ದೇನೆ ಇದರಲ್ಲಿ ಏನಾದರೂ ದೋಷಗಳಿದ್ದಲ್ಲಿ ಮನ್ನಿಸಿರಿ.
ಧನ್ಯವಾದಗಳು.
-ರಂಗಣ್ಣ ನಾಡಗೀರ ಹುಬ್ಬಳ್ಳಿ , ( 9916927315 )
ಚೆನ್ನಾಗಿದೆ
ಸದಭಿರುಚಿ ಕಾರ್ಯಕ್ರಮದ ಪರಿಚಯ. ಧನ್ಯವಾದಗಳು ಸಾರ್
ಹೌದು…ನಮ್ಮೂರ ಪಕ್ಕದ ಮೂಡಬಿದ್ರೆಯಲ್ಲಿನಡೆಯುವ ಆಳ್ವಾಸ್ ನುಡಿಸಿರಿಗೆ ಹಲವಾರು ವರುಷಗಳಿಂದ ತಪ್ಪದೆ ಹೋಗುತ್ತಾ , ಅಲ್ಲಿಯ ಕಾರ್ಯಕ್ರಮಗಳನ್ನು ಮನತುಂಬಿ ಆಸ್ವಾದಿಸುತ್ತಿರುವ ನನಗೆ ತಮ್ಮ ಪುಟ್ಟ ಲೇಖನ ಇಷ್ಟವಾಯ್ತು.
ವಾಸ್ತವದ ಸೊಗಸಾದ ಬಣ್ಣನೆ. ನನಗೂ ಒಮ್ಮೆ ಹೋಗುವ ಅವಕಾಶ ದೊರೆತಿತ್ತು. ಇಂದಿಗೂ ನೆನೆ ನೆನೆದು ಸುಖಿಸುವಂತಿದೆ, ಆ ಆಚ್ಚುಕಟ್ಟುತನ, ಕಾರ್ಯಕ್ರಮಗಳ ವೈಭೋಗ. ಲೇಖನ ನೆನಪುಗಳು ಮರುಕಳಿಸುವಂತೆ ಮಾಡಿತು.
ತುಂಬ ಚೆನ್ನಾಗಿದೆ ಸರ್. ನಿಮ್ಮ ಕನ್ನಡ ಅಭಿಮಾನ ದೊಡ್ದದು.
ನೆನಪು ಮಧುರ
ಮೂಡುಬಿದಿರೆ ನುಡಿ ಸಿರಿಯ ಸಿರಿ ನೆನಪಿನ ಬುತ್ತಿಯನ್ನು ಚೆನ್ನಾಗಿ ಬಿಚ್ಚಿಟ್ಟಿದ್ದೀರಿ
What a wonderful kannda vocabulary you have R.K sir.Enjoyed your writing.Thank you for sharing.Namaste