ನನ್ನವಳು ದೀಪಾವಳಿ ಪಟಾಕಿ
ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲ
ನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ.
ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆ
ಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ
ಅತ್ತೆ ಮಾವನೊಡನೆ ಬುಸುಗುಟ್ಟುತ್ತಿರುತ್ತಾಳೆ ಸರ್ಪಾಸ್ತ್ರದಂತೆ
ನಮ್ಮಕಡೆ ನೆಂಟರುಗಳು ಬಂದಾಗ ವಟಗುಟ್ಟುತ್ತಾಳೆ ಪಟಾಕಿಸರದಂತೆ
ಅವಳ ಕಡೆ ನೆಂಟರು ಬಂದಾಗ ಅರಳುತ್ತಾಳೆ ಪ್ರೀತಿಯ ಹೂಬಾಣದಂತೆ
ಗೆಳತಿಯರು ಇವಳನ್ನು ಹೊಗಳುತ್ತಿರುವಾಗ ಏರುತ್ತಾಳೆ ರಾಕೆಟ್ಟಿನಂತೆ
ಕೆಲಸದವಳೊಡನೆ ವ್ಯವಹರಿಸುವಾಗ ಉರಿಯುತ್ತಾಳೆ ಮತಾಪಿನಂತೆ
ತಾನಂದುಕೊಂಡದ್ದು ನಡೆಯದಿದ್ದಾಗ ಮುನಿಸಿಕೊಳ್ಳುತ್ತಾಳೆ ಪೆನ್ಸಿಲ್ನಂತೆ
ಗೆಳತಿಯರ ಕೂಡಿ ಊರೆಲ್ಲ ತಿರುಗಿ ಬರುತ್ತಾಳೆ ಭೂಚಕ್ರದಂತೆ.
ಇವಳ ಕೈಗೆ ಸಿಕ್ಕಿ ನಾನು ಇದ್ದಲ್ಲೇ ತಿರುಗುತ್ತಿದ್ದೇನೆ ವಿಷ್ಣುಚಕ್ರದಂತೆ.
-ಬಿ.ಆರ್.ನಾಗರತ್ನ. ಮೈಸೂರು.
ಚೆನ್ನಾಗಿ ದೆ ಮೇಡಂ. ಹಾಸ್ಯ ಬರಹ.
ಚಂದದ ಹೋಲಿಕೆ. ಓದಿ ತುಟಿಯಂಚಿನಿಂದ ತೂರಿಬಂತು ಸುಂದರ ನಗೆಯ ಹೂಬಾಣ. ಅಭಿನಂದನೆಗಳು.
ಧನ್ಯವಾದಗಳು.. ವಿಜಯಾ…ಮೇಡಂ..
ಹಾಗೂ..ಪದ್ಮಾ.ಮೇಡಂ
ಚಂದದ ಕವನ
ತಿಳಿಹಾಸ್ಯ ಮಿಶ್ರಿತ ಕವನ ಸೂಪರ್ ಮೇಡಂ.
ಸೊಗಸಾಗಿ ದೆ
ಧನ್ಯವಾದಗಳು… ಶಂಕರಿ ಮೇಡಂ.. ಕೃಷ್ಣ ಪ್ರಭಾ..ಮೇಡಂ.. ಮಹೇಶ್ವರಿ..ಮೇಡಂ