ಹಬ್ಬವೋ ಹಬ್ಬ
ಭಾದ್ರಪದ ಬರುತಲಿದೆ
ಕಳೆದು ಶ್ರಾವಣ
ಗಣೇಶ ಬರುತಿಹನು
ತೋರುತ ನಗುವ ವದನ
ನಮ್ಮೆಲ್ಲರ ಹರಸಿ
ಹೋಗುವನು
ಪಾರ್ವತಿ ನಂದನ
ಆಮೇಲೆ ಆಶ್ವಯುಜ
ನವರಾತ್ರಿಯ ಆಗಮನ
ದುರ್ಗಾಷ್ಟಮಿ, ಮಹಾನವಮಿ
ವಿಜಯದಶಮಿಯಲಿ
ನಾಡಾಗಲಿದೆ
ಆನಂದ ನಂದನ
ಕಾರ್ತೀಕದಲಿ ದೀಪಾವಳಿ
ಬೆಳಕಿನ ಹೂಬಾಣ
ಎಲ್ಲೆಲ್ಲೂ ಹಣತೆಯ
ಬೆಳಕಿನ ತೋರಣ
ಎಲ್ಲ ಮನೆ ಮನದಲಿ
ಸಂತಸದ ಹೂರಣ
ನಂತರದ ದಿನಗಳಲಿ
ಪೂಜೆ ,ಪುಣ್ಯಸ್ನಾನ
ತುಲಾಸಂಕ್ರಮಣ
ಎಳ್ಳು ಬೆಲ್ಲದ ಸಂಕ್ರಾಂತಿ
ಕೊನೆಯಲ್ಲಿ ಶಿವರಾತ್ರಿ
ನಮ್ಮ ನಾಡಲ್ಲಿ ಹೀಗೆ
ಹಬ್ಬದ ಸಂಸ್ಕೃತಿ
ಯುಗಾದಿಯೊಂದಿಗೆ ಆರಂಭ
ವರುಷವಿಡೀ ಮನೆ ಮನಗಳಲ್ಲಿ
ಹಬ್ಬವೋ ಹಬ್ಬ
-ನಟೇಶ
ಹಬ್ಬವೋ ಹಬ್ಬ.. ಕವನ..ಸರಳ ಸುಂದರ ವಾಗಿದೆ..
ಧನ್ಯವಾದಗಳು ಸಾರ್.
ಚಂದದ ಕವನ
ಸೊಗಸಾದ ಸಕಾಲಿಕ ಕವನ.
ಹಬ್ಬಗಳ ಸಂಭ್ರಮ ಕವನದುದ್ದಕ್ಕೂ ಹಾಸುಹೊಕ್ಕಾಗಿ ಮೂಡಿಬಂದಿದೆ. ಅಭಿನಂದನೆಗಳು.