ಜೀವನ-ಪಯಣ
ಜೀವನದ ಪಯಣವದು
ಭೂಮಿ ಸುತ್ತುತಿಹುದೆಂದು
ಹಗಲೊಂದು ಊರು
ರಾತ್ರಿ ಇನ್ನೊಂದು
ಶೈಶ ಬಾಲ್ಯ ಯೌವನ
ಹಿರಿ ಮುದಿತನವೆಲ್ಲ
ನಿಲ್ದಾಣ ಒಂದೊಂದು
ಮಡದಿ ಮಕ್ಕಳು
ನೆಂಟರಿಷ್ಟರು, ಸ್ನೇಹಿತರು
ಎಲ್ಲ ಜೊತೆಗೆ ಪಯಣಿಗರು
ಹಸಿವು ನೀರಡಿಕೆಯನು
ಇಂಗಿಪುದೆ ಉದ್ದಿಶ್ಯ
ಅದಕೆಂದೆ ಮಾಳ್ಪುವುದು
ಬೇಕು ಬೇಡೆಲ್ಲವನು
ಸವೆಸಿ ಹಗಲನು ಕಣ್ಬಿಟ್ಟು
ಕಣ್ಮುಚ್ಚಿ ರಾತ್ರಿಯನು
ಜೊತೆ ಜೊತೆಗೆ ಸವೆಸುವುದು
ಜೀವನದ ಹಾದಿಯನು
ಎಡತೊಡರು ಸಮತಟ್ಟು
ಬಂದಂತೆ ದಾರಿ
ಪಯಣದನುಭವ ತಾ
ವಿಧ ವಿಧದ ರೀತಿಯಲಿ
–ನಟೇಶ
ವಾವ್… ಸರಳ ಸುಂದರ.. ಕವನ..ಚೆನ್ನಾಗಿ ಮೂಡಿಬಂದಿದೆ.. ಧನ್ಯವಾದಗಳು ಸಾರ್.
ಬದುಕು ಏನೆಂದು ಅನಾವರಣಗೊಂಡಿದೆ
ಜೀವನ ಪಯಣದಲ್ಲಿ ಎಲ್ಲವನ್ನೂ ಸಮಭಾವದಲ್ಲಿ ಸ್ವೀಕರಿಸುತ್ತಾ ದಾರಿ ಸವೆಸುವಂತೆ ನೀಡಿರುವ ಸಲಹೆಯ ಭಾವ ತುಂಬಿರುವ ಕವನ ಚೆನ್ನಾಗಿದೆ.
ಚಂದದ ಕವಿತೆ ಮುದ ನೀಡಿತು, ಅಭಿನಂದನೆಗಳು.