ಭಾಷೆಯ ಬಗ್ಗೆ ಕಂಪೋಸಿಟರ್ ಊಹೆಗಳು
ಅನುವಾದಿತ ಕವಿತೆ
ಶೀರ್ಷಿಕೆ
ಬರಲಿರುವದಕ್ಕೆ ವ್ಯಾಖ್ಯಾನವು ನಾನು
ನನ್ನನ್ನು ಭವಿಷ್ಯಜ್ಞಾನ ಎಂದೂ ಕರೆಯಬಹುದು ನೀವು
ನನ್ನ ನಂತರ ಬರುವುದನ್ನು ನೀವು ಓದುತ್ತಿರುವಂತೆ
ನನ್ನ ಅರ್ಥಬದಲಾಗುತ್ತಾ ಹೋಗುತ್ತದೆ
ಭವಿಷ್ಯದಿಂದ, ಇತಿಹಾಸದಿಂದ ರೂಪುಗೊಂಡ ಭೂತಕಾಲ
ಕನಸಿನಿಂದ ಸಾರಾಂಶ ಆಕೃತಿಯನ್ನುನೀಡುತ್ತೆ.
ಪ್ಯಾರಾಗ್ರಾಫ್
ನನ್ನ ನಾನೇ ಬರೆಯುತ್ತೇನೆ, ಹೊಡೆದುಹಾಕುತ್ತೇನೆ,
ಸರಿಪಡಿಸಿ, ಪರಿಷ್ಕರಿಸಿ, ಪುನಃ ಬರೆಯುತ್ತೇನೆ
ನನಗೆ ಅನೇಕ ಆರಂಭಗಳು, ಅನೇಕ ಓದುವಿಕೆಗಳು
ನನ್ನನ್ನು ಮಾರ್ಜಿನ್ ಗಳಿಂದ ಓದಿ
ಕೆಳಗಿನಿಂದ ಮೇಲಕ್ಕೆ, ಕೊನೆಯಿಂದ ಆರಂಭಕ್ಕೆ
ಕೂಡ ಓದುವುದು ಅಗತ್ಯ
ನಾನು ಪಾನೀಯವಾದರೇ ನೀವು ತುಂಬಿದ ಬಟ್ಟಲು.
ಅಂಡರ್ಲೈನ್
ನನಗೆ ನಿಮ್ಮ ಗಮನದ ಮೇಲೆ ನಂಬಿಕೆ ಇಲ್ಲ
ನಿಮ್ಮ ಸ್ವಂತ ನಿಮ್ನರೇಖೆಗಳೊಂದಿಗೆ
ನನ್ನ ಮೇಲೆ ಗೆಲುವು ಸಾಧಿಸಬಹುದು.
ಅಲ್ಪವಿರಾಮ ಚಿಹ್ನೆ
ನೀವು ನಾನಿಲ್ಲದೆ ಮುಂದುವರಿಯಬಹುದು
ಆದರೆ ಮುಂದುವರೆದಂತೆ ನಿಮ್ಮ ಮೇಲೆ ನಿಮಗೆ
ನಂಬಿಕೆ ಇಡಬೇಕಾದರೆ ನಾನು ಇರಲೇಬೇಕು.
ಅರ್ಧವಿರಾಮ ಚಿಹ್ನೆ
ಕೊನೆಗೊಳ್ಳುವ ಮತ್ತು ಮುಂದುವರಿಯುವ ನಡುವೆ
ನಾನು ನನ್ನ ಹಾಸಿಗೆಯನ್ನು ಹರಡುತ್ತೇನೆ.
ಹತ್ತಿರವಿರುವವರಿಗೂ ಸಹ
ದೂರವಿರುವುದು ಉತ್ತಮ.
ಅದು ನಿಮಗೆ, ಅವರಿಗೆ ಸಹಾ
ವಿಮೋಚನೆಗೊಳಿಸುತ್ತದೆ.
ಆವರಣ ಚಿಹ್ನೆ
ಗಾಬರಿಯಿಂದ ತುಂಬಿರುವ ಆಲೋಚನೆಗಳು
ನಾನು ಇತರರ ಮೇಲೆ ಎಸೆಯುವುದನ್ನು ನಿಲ್ಲಿಸುತ್ತೇನೆ
ಎರಡು ಮುಚ್ಚಿದ ಕೈಗಳಂತೆ
ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತೇನೆ
ಅವುಗಳು ಇಡೀ ವಿಷಯವನ್ನು ಕಬಳಿಸಬಾರದಲ್ಲವೇ
‘ಇನ್ನಸಾಕು’ ಎಂಬುದು ನನ್ನ ಸಂದೇಶ.
ಬೇಲಿಯ ಒಂದು ಕಡೆ ಗೆಳತಿ
ಬೇಲಿಯ ಇನ್ನೊಂದು ಕಡೆ ಗೆಳೆಯ
ನಿಂತು ಮಾತನಾಡುತ್ತಿದ್ದರೆ
ಬಂದು ಅವರ ನಡುವೆ ನಿಲ್ಲುತ್ತೇನೆ.
ಅಲ್ಲಿ ನಾನಿಲ್ಲವಂತೆ ಅನಿಸಿದರೂ
ವಾಸ್ತವಕ್ಕೆ ಸ್ಪಷ್ಟವಾಗಿ ನಾನು ಇರುತ್ತೇನೆ.
ಪ್ರಶ್ನಾರ್ಥಕ ಚಿಹ್ನೆ
ಶಾಲೆಯ ಕೊಠಡಿಯೊಂದರಲ್ಲಿ ಎದ್ದು ನಿಂತಿದ್ದ ಬಾಲ ವಿದ್ಯಾರ್ಥಿ ನಾನು.
ನಿಮ್ಮ ಉತ್ತರಗಳನ್ನು ಸಮಸ್ಯೆಗಳಾಗಿ,
ಭರವಸೆಗಳನ್ನು ಅನುಮಾನಗಳಾಗಿ ಪರಿವರ್ತಿಸುತ್ತೇನೆ.
ನೀವು ನೋಡಲು ಬಯಸುವುದಿಲ್ಲಿದ್ದರೂ ನಾನು ನವಿಲಿನಗರಿಯಂತೆ
ನಿಮ್ಮ ಮುಂದೆ ನಿಂತಿರುವೆ
ಆಶ್ಚರ್ಯಾರ್ಥಕ ಚಿಹ್ನೆ
ಕೆಲವು ಭಾವನೆಗಳಿರುತ್ತವೆ
ಪದಗಳು ಹಿಡಿದಿಡಲು ಸಾಧ್ಯವಿಲ್ಲ
ಕೆಲವು ವಿಸ್ಮಯಗಳಿರುತ್ತವೆ
ವಾಕ್ಯಗಳು ವ್ಯಕ್ತಪಡಿಸಲು ವಿಫಲವಾಗುತ್ತವೆ
ನಾನು ಅಲ್ಲಿರುತ್ತೇನೆ
ಸಂದು
ನಾನೇ ಇಲ್ಲದಿದ್ದರೆ
ಪದಗಳು ಒಂದಕ್ಕೊಂದು ಸಿಕ್ಕಿಹಾಕಿಕೊಂಡು,
ಅರ್ಥಗಳು ಒಂದಕ್ಕೊಂದು ಅಂಟಿಕೊಂಡು
ಭಾಷೆ ಹೇರಿಕೆ ಇಲ್ಲವಾಗುತ್ತೆ.
ಜನರನ್ನು ಎಲ್ಲಿ ಇರಬೇಕೋ ಅಲ್ಲಿ ನಿಲ್ಲಿಸುತ್ತೇನೆ.
ಬರಹಗಳಲ್ಲಿ ಬೆಳಕನ್ನು ಹರಡಲಿಸುತ್ತೇನೆ.
ವಾಕ್ಯಗಳ ನಡುವೆ ಪದಗಳ ನಡುವೆ
ಪ್ಯಾರಾಗಳ ನಡುವೆ ಓದುಗ ಕುಳಿತು
ವೀಕ್ಷಿಸಲು ಮತ್ತು ವಿವರಿಸಲು
ಅಗತ್ಯವಿರುವಸ್ಥಳ ನಾನು.
ಖಾಲಿ ಸ್ಥಳವಾದರೂ
ಕೆಲವು ಸಲಹೆಗಳನ್ನುನೀಡುತ್ತೇನೆ.
ಪೂರ್ಣ ವಿರಾಮ
ಉಸಿರು ಆಡದಿದ್ದಾಗ ಉಪಶಮನ ಕೊಡುವ
ಮಾತ್ರೆ ನಾನು.
ನನ್ನ ಸಹಾಯದಿಂದ ಉಸಿರನ್ನು ತೆಗೆದುಕೊಂಡು
ಮುಂದುವರಿಯಿರಿ.
ಕೊನೆಯಸಾಲು
ಗೆಳೆಯರೇ! ಕೊನೆಗೆ ಬಂದಿರುತ್ತೇವೆ
ನಾನೇ ಇಲ್ಲದಿದ್ದರೆ ನೀವು ನಿಲ್ಲುವುದಿಲ್ಲ ಎಂದು ನನಗೆ ಗೊತ್ತು
ನಾನು ಮೃತ್ಯು.
ಮಲಯಾಳ ಮೂಲ:ಕೆ.ಸಚ್ಚಿದಾನಂದನ್
ಆಂಗ್ಲ ಅನುವಾದ: ಕೆ.ಸಚ್ಚಿದಾನಂದನ್
ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀಮೋಹನ್
ವಿಭಿನ್ನವಾದ ಕವನ
ನಯನ ಬಜಕೂಡ್ಲು ಧನ್ಯವಾದಗಳು.
ಮತ್ತೆ ಮತ್ತೆ ಓದಿ ಸಂಗ್ರಹಿಸಿಟ್ಟು ಕೊಳುವಂಥಹ ಅನುವಾದಿತ ಕವನಗಳು..ಧನ್ಯವಾದಗಳು ಸಾರ್
ನಾಗರತ್ನ ಬಿ. ಆರ್ ಧನ್ಯವಾದಗಳು.
ಅಪರೂಪದ ಶೈಲಿಯ ಕವನ..ಇಷ್ಟವಾಯಿತು.ಮೂಲ ಕವಿಗೂ, ತಮಗೂ ಅಭಿನಂದನೆಗಳು.
Hema ಧನ್ಯವಾದಗಳು
ಮತಿಯನ್ನು ಮಂಥನಕ್ಕೆ ಹಚ್ಚುವ ವಿಭಿನ್ನ ಕವಿತೆಗಳು. ಸೊಗಸಾದ ಅನುವಾದ.
Padma Anand ಧನ್ಯವಾದಗಳು.
ಆಯಾಯ ಚಿಹ್ನೆಗಳಿಗಾಗಿ ವಿಶೇಷವಾದ ಕವನಗಳು ಬಹಳ ಇಷ್ಟವಾಯ್ತು.
ಶಂಕರಿ ಶರ್ಮ ಧನ್ಯವಾದಗಳು.