ಕವಿತೆಯಾಸೆ

Share Button

ಒಳಗೊಳಗೆ ಅಳುತಲಿದೆ
ಹೊರಬರಲು ಶಾಂತಿ ಕವಿತೆ
ಅಲವತ್ತಿ ಕೇಳುತಿದೆ
ಹೀಗೆನ್ನ ಕಡೆಗಣಿಪುವುದು ಒಳಿತೆ

ಹೊರ ಬಂದರೆ ಇರುವುದೇ
ಎನ್ನ ಆದರಿಪುವರ ಕೊರತೆ ?
ಸೂಕ್ಷ್ಮಮತಿ ನಿನ್ನ ಮನಕೆ
ಹಾಗೆಂದು ಅನಿಸಿತೆ !
ಹಾಗಲ್ಲದಿದ್ದಲ್ಲಿ ಹೊರಗೆ
ಕರೆದೆನ್ನ ಎಲ್ಲ
ತೋರದಿರುವುದೇಕೆ ಮತ್ತೆ ?

ತೋರಬಾರದೆ ಹೊರಗಿನದೆಲ್ಲ
ನಿತ್ಯ ಕೂಗಾಟ, ಆರ್ಭಟ
ಯಾರೊಡನೆ ಎಲ್ಲರದು ಹೋರಾಟ ?
ಆಳುವವರ ಬೀಳಿಸಿ
ನಾವಾಳಬೇಕೆಂಬವರ
ನಾಳೆಗೂ ಉಳಿಸಿಟ್ಟಿರುವ
ದೊಂಬರಾಟ !?

ನೋಡಬಾರದೆಂದೇನು ನಾನು?
ಉಸಿರಾಟಕೇ ಕುತ್ತು ತರುವ
ಕ್ರಿಮಿಯೊಂದ  ತಂದು ತೂರುತ,
ಜಗದ ಕತ್ತು ಹಿಸುಕ ಹೊರಟ,
ಒಬ್ಬರಿಂದೊಬ್ಬರು
ದೂರವಾಗುವುದ ನೋಡಿ
ಖುಷಿ ಪಟ್ಟ, ಮತ್ತೀಗ ಸೋತು
ಸೊರಗಿದವರ ನರಳಾಟ !

ನಾ ಬರುವ ಮುನ್ನ
ಮುಗಿಸಿ ಬಿಡಲು
ಜಗದೊಳಗಿನೆಲ್ಲ ಸೊಗಸ,
ಮನದೊಳಗೆ ಚಿತ್ರಿಸಿ
ನರಕ ಸೃಷ್ಟಿಯ ನೀಲಿ ನಕಾಶ,
ಹೊಂಚು ಹಾಕುವವರಿಗೆ
ಸಿಗದಾಗಲಿ ಅವಕಾಶ

ಮುಂದೊಂದು ದಿನ
ಹೊರಗೆ ಕರೆದೆನ್ನ ತೋರು
ಶುಭ್ರ ನೀಲಿ ಆಗಸ,
ಸೂರ್ಯ , ಚಂದ್ರ, ಗ್ರಹ
ತಾರೆಗಳ ಸೊಗಸ !

ಕೈ ಮುಗಿದು ಬಿಡುವೆ
ಕತ್ತೆತ್ತಿ ಮೇಲಕ್ಕೆ,
ಏಕೆಂದರೆ ಅಳಿಯದೆ ,
ಸಾಕ್ಷಿಯಾಗಿ ನಿಂತಿವೆ ,
ಅಳಿಸಿಬಿಡುವೆನೆಲ್ಲವನೆಂದು ಬಂದು
ಅಳಿದು ಹೋದವರೆಲ್ಲರ
ಅಟ್ಟಹಾಸಕ್ಕೆ

-ನಟೇಶ

8 Responses

  1. ನಯನ ಬಜಕೂಡ್ಲು says:

    Nice

  2. ನಾಗರತ್ನ ಬಿ.ಆರ್. says:

    ಅರ್ಥಪೂರ್ಣ ವಾದ ಕವಿತೆ ಚೆನ್ನಾಗಿದೆ ಸಾರ್

  3. Anonymous says:

    ಚೆನ್ನಾಗಿದೆ

  4. Hema says:

    ಚೆಂದದ ಕವನ

  5. . ಶಂಕರಿ ಶರ್ಮ says:

    ಭಾವಪೂರ್ಣ ಕವಿತೆ ಮನಮುಟ್ಟಿತು… ಧನ್ಯವಾದಗಳು.

  6. Padma Anand says:

    Very nice.

  7. ಅರ್ಥಪೂರ್ಣವಾದ ಸುಂದರ ಕವನ

  8. Mittur Nanajappa Ramprasad says:

    ಹೊರಬರುವ ಶಾಂತಿ ಕವಿತೆಗೆ ಅದೆಷ್ಟು ಕಳವಳವು /
    ಲೋಕದಲಿ ಆಗುತಿರುವ ಜಂಜಾಟಗಳ ಆಘಾತವು
    ಹೊರಬರುವ ಶಾಂತಿ ಕವಿತೆಗೆ ಅದೆಷ್ಟು ಕಳವಳವು /
    ನೆಡೆಯುತಿರುವ ಆರ್ಭಟ ಕೂಗಾಟದ ಸಂಘರ್ಷವು/

    ಅವಕಾಶವಿದೆ ಶಾಂತಿ ಕವಿತೆಗೆ ಬದಲಾಯಿಸಲು
    ಕವಿತೆಗಳ ಸಾಮರ್ಥ್ಯದಲ್ಲಿ ಕರಗುವುದು ಕತ್ತಲು/
    ಕವಿ ಕಲ್ಪನೆಯಲ್ಲಿರುವುದು ಶಕ್ತಿ ಮಾರ್ಪಡಿಸಲು/
    ಕವನಗಳ ಸಾರಸತ್ವದಲ್ಲಿ ನಶಿಸುವುದು ದಿಗಿಲು/

    ಹೊರತನ್ನಿ ಶಾಂತಿ ಕವಿತೆಯ ಈ ಶುಭಗಳಿಗೆಯಲಿ/
    ತಡಮಾಡದೆ ಅನವರಿಸಿರಿ ಸ್ವಚ್ಛ ಮನೊಗತದಲಿ/
    ಪ್ರಕಾಶಿಸಲಿ ಶಾಂತಿಯು ಕವಿತೆಯ ಸಾಲುಗಳಲ್ಲಿ/
    ನೀಲಿಯಾಗಸದ ಸೂರ್ಯಚಂದ್ರರ ಹೊಳಪಿನಲಿ/

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: