“ಗಂಗೆ”
ಗಂಗೆ ಅಗಬೇಕು
ಪುಣ್ಯವತಿ ಗಂಗೆ,
ಎಲ್ಲವನ್ನು ಮೀರಿ
ಹರಿವ ಗಂಗೆ
ಎಲ್ಲವನ್ನು ದಾಟಿ
ದಡ ಮುಟ್ಟುವ ಗಂಗೆ
ನಾನಾಗಬೇಕು,,,,,
ನನ್ನ ಮಡಿಲಿಗೆ ಬಿದ್ದ
ಕಲಕುವ ಮಾತುಗಳು,,,,
ಕೊಳಕು ಮನಸುಗಳು,,,
ನೋಯಿಸುವ ನಡುವಳಿಕೆಗಳು,,,
ಬೆಣ್ಣೆ ಮಾತಾಡುತಾ
ಬೆನ್ನಿಗೇ ಇರಿಯುವವರು,,,
ಚುಚ್ಚಿ ರಕುತ ಬರೆಸಿ
ಸಂತೋಷಿಸುವವರು,,,
ಎಲ್ಲಾ ಅಂದರೆ
ಎಲ್ಲವನ್ನು ಎಲ್ಲರನ್ನು
ಅರಗಿಸಿಕೊಂಡು
ಕರಗಿಸಿಕೊಂಡು
ಹಿಂದೆ ಸರಿಯದ ಗಂಗೆಯಂತೆ
ನಾನು ಹರಿಯುತ್ತೇನೆ
ಒಳಗೆ
ಭೋರ್ಗರೆತದೊಂದಿಗೆ
ಹೊರಗೆ
ಗಂಭೀರ ಗಂಗೆಯಂತೆ,,,,,,
ಭೂ ಜಾತೆ ಗಂಗೆ
ಸೋತಿದ್ದುಂಟೆ,,,,,
ಈ ಜಗದೊಳಗೆ,,,,
ನಾನು,,,ಅಷ್ಟೇ,,,,
–ವಿದ್ಯಾ ವೆಂಕಟೇಶ್ , ಮೈಸೂರು
ಬಹಳ ಅರ್ಥಪೂರ್ಣ ಕವಿತೆ
ಸರಳ ಸುಂದರ ಅರ್ಥಪೂರ್ಣ ಕವನ ಸೋದರಿ..
ಸದಾಶಯವುಳ್ಳ ಸುಂದರ ಕವಿತೆ.
ಹೌದು, ಅರಗಿಸಿಕೊಂಡು ಕರಗಿಸಿಕೊಂಡು ಹರಿಯಬೇಕು!
ಗಂಗೆಯಂತೆ ನಾನಾಗಬೇಕು…ಸದಾಶಯದ ಕವನ ಇಷ್ಟವಾಯ್ತು.
ಸರ್ವರಿಗೂ ಸವಿನಯದ ವಂದನೆಗಳು