ನೆನಪುಗಳ ಮರೆಯುವುದಾದರೂ ಹೇಗೆ!
ನನ್ನಲ್ಲೇ ತುಂಬಿಕೊಂಡಿದ್ದ
ನೆನಪುಗಳನ್ನೆಲ್ಲಾ ಗುಡಿಸಿ
ಕಸದಬುಟ್ಟಿಯಲ್ಲಿ ಸುರಿದು
ಖುಷಿಯಿಂದ ಬೀಗುತಾ ಒಳಬಂದು
ನಿರಮ್ಮಳವಾಗಿ ಉಸಿರುತ್ತಾ ಕಣ್ಮುಚ್ಚಿ ಕುಳಿತೆ!
ಕಿಟಕಿಯಿಂದ ನುಸುಳಿ
ಬಂದ ಗಾಳಿಯು ನನ್ನ
ಕಿವಿಯಲ್ಲಿ ಅದೇನೋ
ನಿನ್ನ ಕುರಿತಾಗಿಯೇ ಉಸುರಿತ್ತು
ಮೌನವಾಗಿದ್ದ ಮನಸ್ಸನ್ನು ಕೆದಕಿ ಬೆದಕಿ
ನನ್ನನ್ನೇ ನೋಡಿ ನಕ್ಕು ಸಾಗಿತ್ತು.
ಮನದ ಅಂಗಳದಿಂದ
ಸರಿಸಿ ಎಸೆದಿದ್ದು ಮತ್ತೆ
ನನ್ನನ್ನೇ ಆವರಿಸಿಕೊಂಡಿತ್ತು
ಅರೆ! ಇದೆಂತಹ ಅಚ್ಚರಿಯಂದು
ಮನದೊಳಗೆಲ್ಲಾ ದಿಗಿಲು
ಸುಳಿವು ನೀಡದೆ ಸುನಾಮಿಯಂತೆ
ಭುಗಿಲೆದ್ದು ಕುಣಿದಿತ್ತು.
ಗಾಳಿ, ಮಳೆ ಬೀಸಿದಂತೆ
ನನ್ನಲ್ಲೂ ನಿನ್ನ ನೆನಪಿನ ಗಾಳಿಯದೇ ಸದ್ದು
ಸುಮ್ಮನೆ ಬಂದು ಹೋಗುವುದಿಲ್ಲ
ಮಿಂಚಿ ಮರೆಯಾಗುವುದಿಲ್ಲ
ಸರಿಸಿದರೂ ಗುಡಿಸಿದರೂ
ಮರೆಯಾಗದೆ ಸದಾ ನನ್ನಲ್ಲೇ ಮೆರೆಯುತ್ತಿರುವ
ನೆನಪುಗಳ ಮರೆಯುವುದಾದರೂ ಹೇಗೆ!?
-ಸೌಮ್ಯಶ್ರೀ ಎ.ಎಸ್,ಮೈಸೂರು
ತುಂಬಾ ಚಂದದ ಸುಂದರ ಕವನ…
Very nice
ಸರಳ ಸುಂದರ ಕವನ ಚೆನ್ನಾಗಿದೆ ಮೇಡಂ
ಸೊಗಸಾಗಿದೆ ಕವನ
ಅರ್ಥಪೂರ್ಣವಾದ ಕವನ ವಂದನೆಗಳು
ಸುಂದರವಾದ ಭಾವ ಮಿಡಿತದ ಕವನ
ಹೌದು…ನೆನಪುಗಳೆಂದರೇ ಹಾಗೆ..ಬೇಡವೆಂದರೂ ಬರುವ, ಬಂದು ಕಾಡುವ, ಕೆಲವೊಮ್ಮೆ ಮುದನೀಡುವ ಅನಪೇಕ್ಷಿತ ಅತಿಥಿ! ಬಹಳ ಸೊಗಸಾದ ಭಾವಪೂರ್ಣ ಕವನ. ಧನ್ಯವಾದಗಳು ಮೇಡಂ.
ಮರೆಯಬೇಕೇಕೆ? ಬೆಚ್ಚಗೆ ಕುಳಿತಿರಲಿ ಬಿಡಿ ಮನದ ಗೂಡೊನೊಳಗೆ
ಸೊಗಸಾದ ರಚನೆ