ತಲೆಮಾರು
ಹೊಸ ತಲೆಮಾರಿನಲಿ
ನಮ್ಮ ಮಕ್ಕಳೇ
ನಮಗೆ ಅಪರಚಿತರಾದರೇಕೊ ಕಾಣೆ,
ಮಕ್ಕಳು
ಕಷ್ಟಕ್ಕೆ- ಭಾವಕ್ಕೆ
ಹೆಗಲು ಕೊಡದ ಮೇಲೆ
ಕರುಳಿನ ಚೂರುಗಳಲ್ಲ ಅವರು,
ಕಳೆದ ಜನುಮದ
ಸಾಲದ ಬಾಕಿಯ
ವಸೂಲಿಗಾರರು,
ಹೃದಯ ಹೆತ್ತಿದಕ್ಕೆ
ಧನ್ಯತೆ ಅನುಭವಿಸದ ಮೇಲೆ
ನಾವು ಮಾಡಿದ ಪಾಪದ
ಪ್ರತಿರೂಪಗಳು,
ಸಂಸಾರ ಸಾಗರದಲ್ಲಿ
ಮುಳುಗುವಾಗ ದೋಣಿಯಾಗಿ
ಮಕ್ಕಳು ಬರದ ಮೇಲೆ
ಮಕ್ಕಳಲ್ಲ ಅವರುಗಳು
ದೃಷ್ಟಿಯಿರದ ಕಣ್ಣುಗಳು
-ವಿದ್ಯಾ ವೆಂಕಟೇಶ್. ಮೈಸೂರು
ಸರಳ ಸುಂದರ ಕವನ ಚೆನ್ನಾಗಿದೆ ಎಂದು ಹೇಳುತ್ತೇನೆ.ಆದರೆ ಬದುಕಿನಲ್ಲಿ ನಾವು ಆದಷ್ಟು ಸಕಾರಾತ್ಮಕ ಚಿಂತನೆ ಮಾಡಬೇಕು ಎಂದು ನನ್ನ ಅನಿಸಿಕೆ ಈ ನಿಟ್ಟಿನಲ್ಲಿ ಯೋಚಿಸು ಸೋದರಿ ವಿದ್ಯಾ
ವಂದನೆಗಳು ಅಕ್ಕಾ
ಇಂದಿನ ವಾಸ್ತವವನ್ನು ಬಹಳ ಚೆನ್ನಾಗಿ ವಿವರಿಸಲಾಗಿದೆ.
ವಂದನೆಗಳು
ಅರಗಿಸಲಾಗದ ಕಟುಸತ್ಯವೊಂದನ್ನು ಅನಾವರಣಗೊಳಿಸಿದ ಕವನ ಚೆನ್ನಾಗಿದೆ.
ಧನ್ಯವಾದ ಗಳು ಮೇಡಂ
ಜಾಳು ಜಾಳಾಗುತ್ತಿರುವ ಸಂಬಂಧಗಳ ಮೇಲೆ ಕ್ಷ -ಕಿರಣ ಬೀರುತ್ತಿದೆ ನಿಮ್ಮ ಸುಂದರ ಕವನ.