ಮಗುವಾಗಿಬಿಡುವೆ..
ಕನಸ ಕಟ್ಟುವಾತುರದಲಿ
ಊರುಕೇರಿ ಸುತ್ತಿಬಂದು
ತರತರದ ಚಹರೆ ನೆನಪಾಗಿ
ನಡುರಾತ್ರಿ ಬೆವತು..
ಮುಖವಾಡ ಲೋಕದ
ಖುಲಾಸೆಗಳೇ ಸಾಕೆನಗೆ,
ನಾ ಮಗುವಾಗಿಬಿಡುವೆ!
ನಗುವ ಕಣ್ಣ ಹಿಂದಿರುವ
ಈರ್ಷ್ಯೆ ಹುಡುಕುವ ಖಯಾಲುಗಳ್ಯಾಕೆ?
ಜನರಂತರಾಳವ ಅರಿಯುವ
ತವಕ ನನಗ್ಯಾಕೆ?
ಬಹುರೂಪೀ ಸೋಗನ್ನು ಸೋಯಿಸದೇ
ನನ್ನ ಪಾಡಿಗೆ ನಾ
ಇದ್ದುಬಿಡುವೆ,
ಸಂತೆಯಲಿದ್ದರೂ
ಚಿಂತೆಗಳಿಲ್ಲದ
ಮಗುವಾಗಿಬಿಡುವೆ!
ಹಗೆತನದ ಹೊಗೆಯೊಂದ
ನೋಡಿದರೂ ನೋಡದ ಹಾಗೆ..
ಬದುಕಿನ ಜಾತ್ರೆಯಲಿ
ಭಾರೀ ಬೇಡಿಕೆಯಿರುವ
ಮುಖವಾಡದ ಚಹರೆಯ
ಅರಿವಿರದ ಹಾಗೆ..
ಮಗುಮ್ಮಾಗಿ ಮಲಗಿ
ಮಗುವಾಗಿಬಿಡುವೆ.
–ಆಶಾ ಹೆಗಡೆ
ಮುಗ್ದ ಮಗುವಿನಂತಾಗುವ ಹಪಾಹಪಿ .. ತೋರಿಸುವ ಕವನ ಸರಳ ಸುಂದರ ವಾಗಿದೆ ಮೇಡಂ.
ಧನ್ಯವಾದಗಳು ಮೇಡಂ
ಮತ್ತೆ ಮುಗ್ಧ ಮಗುವಾಗಿ ಬಿಡುವುದು ಎಲ್ಲರೂ ಇಚ್ಚಿಸುವ ಕೈಗೂಡದ ಆಸೆ. ಈ ಹಂಬಲವನ್ನು ಕವನ ರೂಪದಲ್ಲಿ ಚೆನ್ನಾಗಿ ಹೆಣೆದಿದ್ದೀರಿ.
ಧನ್ಯವಾದಗಳು ಮೇಡಂ
ಕವನವೂ ಮಗುವಿನಂತೆಯೇ ಮುದ್ದು ಮುದ್ದಾಗಿದೆ.
ಧನ್ಯವಾದಗಳು ಮೇಡಂ
ಅರ್ಥಪೂರ್ಣವೆನಿಸಿ ಈ ಕವನ.ಧನ್ಯವಾದಗಳು
ಧನ್ಯವಾದಗಳು ಸರ್
ಅರ್ಥಪೂರ್ಣ ಕವನ ಇಷ್ಟವಾಯಿತು
ಸುಜಾತಾ ರವೀಶ್
ಧನ್ಯವಾದಗಳು ಮೇಡಂ
ಜಗತ್ತಿನ ಯಾವುದೇ ಜಂಜಾಟಗಳಿಲ್ಲದೆ, ಮಗುವಾಗಿ ಮಲಗಿಬಿಡುವಾಸೆಯ ಸೊಗಸಾದ ಕವನ.
ಧನ್ಯವಾದಗಳು ಮೇಡಂ
ಕಂಡೂ ಕಾಣದಂತೆ ಬದುಕಬೇಕಾದ ಬದುಕಿನ ಬವಣೆಯ ಕವನ ಬಹಳ ಚೆನ್ನಾಗಿದೆ
ಧನ್ಯವಾದಗಳು ಸರ್
ಅರ್ಥಪೂರ್ಣ ಕವನ ಅತ್ಯುತ್ತಮ ವಾಗಿದೆ
ಧನ್ಯವಾದಗಳು ಮೇಡಂ
ಸುಂದರ ಕವನ
ಧನ್ಯವಾದಗಳು ಮೇಡಂ