ಮರೆಯಾಗದಿರಲಿ ಸೀತೆ
ಮಾತೆಯಾದಳು ಸೀತೆ
ಮಾತನಾಡದೆ ಪ್ರೀತೆ
ಭೂತ ಭವಿತದ ಗಾಥೆ
ಅಂತವಿರದ ಪುನೀತೆ
ನೀರೆ ಮಾತನು ಕಲಿತು
ಭಾವ ಬಗೆ ಬಗೆ ಬಲಿತು
ಬಂಧ ಕಳಚುತ ಹಳತು
ಕಟ್ಟಿ ನೂಪುರ ಹೊಸತು
ಹಾರಲೆಳಸಿ ದಿಗಂತ
ಎದುರಿಸುತ ಹಲ ಪಂಥ
ಭಾವ ಬಗೆ ಬಗೆ ಸ್ವಂತ
ಅಂಕೆಯಿರದೆ ಅನಂತ
ಸೀತೆಯುಳಿಯಲಿ ಮನದಿ
ಮಾತೆ ಭಗಿನಿಯ ಬಲದಿ
ಗಾಥೆಯಾಗುವ ವಿಧ ವಿಧದಿ
ಭರತ ಭೂಮಿಯ ನೆಲದಿ….
–ವಿದ್ಯಾಶ್ರೀ ಅಡೂರ್, ಮುಂಡಾಜೆ
ಸೊಗಸಾದ ಕವನ
Nice sis
ಚಂದದ ಕವಿತೆ
Beautiful
ಅರ್ಥಪೂರ್ಣ ವಾದ ಕವನ ಸೀತೆಯ ನೆನಪುಗಳ ಆವರಣ ಸದಾಕಾಲ ಆಕೆಗೆ ನಮ್ಮಲ್ಲಿ ಸ್ಥಾನ ಚೆನ್ನಾಗಿ ಮೂಡಿಬಂದಿದೆ.. ಮೇಡಂ.
“ಸೀತೆಯುಳಿಯಲಿ ಮನದಿ
ಮಾತೆ ಭಗಿನಿಯ ಬಲದಿ
ಗಾಥೆಯಾಗುವ ವಿಧ ವಿಧದಿ” – ಗಮನಾರ್ಹ ಸಾಲುಗಳು.
ಸುಂದರ ಕವನ.
ಸೊಗಸಾದ ಅರ್ಥಪೂರ್ಣ ಕವನ.